ನಮ್ಮ ಹೆಮ್ಮೆಯ ಸಮಾಜಕಾರ್ಯ

ವಿಶ್ವ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ವಿಶ್ವದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಸಮಾಜ ಸೇವಕರ ಸಾಧನೆಗಳನ್ನು ಸರ್ವರಿಗೂ ತಿಳಿಸಲು ಅವರ ಕಾರ್ಯಗಳನ್ನು ಹಾಗೂ ಅವರ ಕಾರ್ಯಗಳ ಉದ್ದೇಶ ವನ್ನು ಸಮಾಜಕ್ಕೆ ದರ್ಶಿಸಲು ಹಾಗೂ ನವ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯ ಸೇವೆಗಳ ಅರಿವನ್ನು ಸರ್ವರಿಗೂ ಮೂಡಿಸಲು ಮೀಸಲಾದ ದಿನವೆಂದು ಹೇಳಬಹುದು

ಸಮಾಜ ಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.

ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜ ಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ ಅವರಿಗೆ ಉತ್ತೇಜನ ನೀಡುವ ದಿನವಾಗಿದೆ ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜ ಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.

ಇಂದಿನ ಯುವ ಸಮಾಜ ಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ:

ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.

ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.

 ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.

ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು  ಚಳುವಳಿಗಳನ್ನು ಮುನ್ನಡೆಸಿದವರು.

ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.

ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.

ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ನವ ಸಮಾಜ ಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು   ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡೋಣ.

ಸಮಾಜ ಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕೋರ್ಸ್ಗೆ ಸೇರಲು ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ  ನಮ್ಮ ಪಾಲು ನೀಡೋಣ.

 

ಬರಹ : ನ್ಯಾನ್ಸಿ ಲವಿನಾ ಪಿಂಟೊ,

ಸಹಾಯಕ ಪ್ರಾಧ್ಯಾಪಕರು,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ ಶುಭಾಶಯಗಳು (Happy Teachers Day)

“ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ”

ಅಂದರೆ, ಗುರುವು ಬ್ರಹ್ಮ, ವಿಷ್ಣುಮತ್ತು ಮಹೇಶ್ವರರ ಸ್ವರೂಪಿಯಾಗಿದ್ದು, ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು, ಎನ್ನುತ್ತಾರೆ ಶಂಕರಾಚಾರ್ಯರು.

ಹಾಗೆಯೇ ಪುರಂದರದಾಸರು : “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ತಿಂಗಳು ಬಂತೆಂದರೆ ಮೊದಲು ನೆನಪಾಗುವುದು ಶಿಕ್ಷಕರ ದಿನಾಚರಣೆ, ಹೌದು ಸೆಪ್ಟೆಂಬರ್‌ 5 ಶಿಕ್ಷಕರ ದಿನಾಚರಣೆ ಹಾಗೂ ಡಾ.|| ಸರ್ವಪಲ್ಲಿ ರಾಧಕೃಷ್ಣನ್‌ ರವರ ಹುಟ್ಟುಹಬ್ಬವೂ ಕೂಡ. ಪ್ರತಿ ಶಾಲಾ ಕಾಲೇಜುಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ತಮಗೆ ತಿಳಿದಿರುವ ವಿಷಯದ ಜೊತೆಗೆ, ತಮಗೆ ತಿಳಿದಿರದ ವಿಷಯಗಳನ್ನು ತಿಳಿದು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರುಗಳಿಗಾಗಿಯೇ ಇರುವ ದಿನ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆ ದಿನ ತಮ್ಮ ಶಿಕ್ಷಕರಿಗಾಗಿ ಹಬ್ಬದ ವತಾವರಣ ನಿರ್ಮಿಸುತ್ತಾರೆ.

ವಿವಿದ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಆ ದಿನವನ್ನು ಅರ್ಥ ಪೂರ್ಣಗೊಳಿಸುತ್ತಾರೆ. ಅಲ್ಲದೆ ತಮ್ಮ ವಿದ್ಯಾರ್ಥಿ ಜೀವನದ  ಶಿಕ್ಷಕರನ್ನು / ನೆಚ್ಚಿನ ಗುರುಗಳನ್ನು ನೆನಪಿಸಿಕೊಂಡು ಕೃತಙ್ಞಾತೆಗಳನ್ನು ತಿಳಿಸುತ್ತ ಅವರೊಂದಿಗಿನ ಆವಿನಾಬಾವ ನೆನಪುಗಳನ್ನು ಮೆಲುಕು ಹಾಕುವುದು ಈ ದಿನದ ವಿಶೇಷ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ತೆಗಿಸಿದ ಭಾವಚಿತ್ರಗಳೊಂದಿಗೆ ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ಸಂಬ್ರಮಿಸುತ್ತಾರೆ.

ಅರಿವಿಗೂ ಸಿಗದ ಜ್ಞಾನದ ಮೂರ್ತಿ ಶಿಕ್ಷಕ.

ಅರಿಯದೆ ಆದ ತಪ್ಪನ್ನು ಕ್ಷಮಿಸುವವ ಶಿಕ್ಷಕ.

ಅರಿವೂ ಎಂಬ ಜ್ಞಾನವನ್ನು ಬಿತ್ತಿ,  ಪೋಷಿಸುವ  ಮಾರ್ಗದರ್ಶಕ.

ಅರಿಯದೆ ಬರುವ ಅಹಂ ಎಂಬ ನೌಕೆಯನ್ನು ಕಿತ್ತೊಗೆಸಿ.

ಪ್ರತ್ಯಕ್ಷ ಮೂರ್ತಿ ಆಗುವ ಸಹಾನು ದ್ಯೋತಕ.

ಅಮ್ಮ ಅಪ್ಪ ಎಂಬ ಎರಡಕ್ಷರದ ನಡುವೆ.

ಎಣಿಕೆಗೂ ಸಿಗದಷ್ಟು ಬಂದು ಹೋಗುವ ಗುರುವೆಂಬ ನಾವಿಕ.

ಆಕಾಶದ ಅಂಚನ್ನು ತಟ್ಟುವಂತೆ  ಪ್ರೋತ್ಸಾಹ ನೀಡುವ ಉತ್ಸಾಹದ ಬಿಂಬಕ.

ಅಮ್ಮಂನಂತೆ ಆಲಂಗಿಸಿ, ಅಪ್ಪನಂತೆ ಆಶೀರ್ವದಿಸಿ ಆತ್ಮೀಯ ಮಿತ್ರರಾಗುವ

ಅಪಾರ ಜೀವೊನ್ಮದದ ಹಿಂಚಾಲಕ.

ಎಂದಿಗೂ ನಮ್ಮೊಂದಿಗಿರುವ ಗುರುವೇ.

ನಿಮಗಿದೋ ವರ್ಷಾಕೊಮ್ಮೆ ಆಚರಿಸುವ

ಶಿಕ್ಷಕರ ದಿನದ ಶುಭಾಶಯಗಳು.

💐||ಗುರುಭ್ಯೋ ನಮಃ||💐

ಭಾರ್ಗವಿ. ಜಿ.ಆರ್

ಪ್ರಥಮ ಬಿ. ಎ. ವಿದ್ಯಾರ್ಥಿನಿ

ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಗೆಳೆಯನಿಗೊಂದು ಮಾತು

ಗೆಳೆಯನಿಗೊಂದು ಮಾತು

ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿ ಸೆಳೆದು ಬಿಡುತ್ತದೆ ವಿದ್ಯುತ್ ಶಾಕ್ನಂತೆ.  ಇಲ್ಲ, ಸ್ಪರ್ಶಕ್ಕೆ ಸಿಗದಷ್ಟು ದೂರವೇ ಇರಬೇಕು.ಈ ಜೀವನಚಕ್ರ ನದಿಯ ತೆರೆಗಳಂತೆ ಉರುಳಿ ಹೊರಳುತ್ತಲೇ ಇರುತ್ತದೆ. ಇದಕ್ಕೆ ಆರಂಭವಿಲ್ಲ, ಅಂತ್ಯವಿಲ್ಲ, ಸ್ಥಿರತೆ ಇಲ್ಲ.

ಜೀವದ ಗೆಳೆಯನಿರಲಿ ಗೆಳತಿಯಿರಲಿ ನಡುವೊಂದು ಲಕ್ಷ್ಮಣ ರೇಖೆಯ ಪಾವಿತ್ರ್ಯ ಕಾಯ್ದುಕ್ಕೊಳ್ಳೋಣ. ಆಗಲೇ ನಮ್ಮ ಅಕ್ಕರೆಯ ಆಚೆ ಈಚೆ ಇಬ್ಬರು ಬೆಳೆಯಬಲ್ಲೆವು. ಅಷ್ಟೇ ಅಲ್ಲದೆ ಪರಸ್ಪರರ ಹೊಸ ಅಗತ್ಯಗಳನ್ನು ಅರಿಯುತ್ತ ಸಂಬಧದಲ್ಲಿ ತಾಜಾತನ ಉಳಿಸಿಕ್ಕೊಳ್ಳಬಲ್ಲೆವು.

ನಿನ್ನ ಗೆಳೆತನದ ಸುವಿಶಾಲ ಆಲದಡಿ ಪಸರಿಸಿ ತಣ್ಣನೆಯ ತಂಪಿನಲಿ ತಂಗಿರುವೆನು. ಜೀವನದ ಅನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ತಂಗಿರುವೆನು. ಗೆಳೆತನವೆ ಇಹಲೋಕಕ್ಕಿರುವ ಅಮೃತ  ಅದನ್ನುಳಿಸಿಕೊಂಡರೆ ಅದುವೇ ಜೀವನಾಮೃತ.

ನೊಂದಾಗ ಸಮಾಧಾನ ಹೇಳಿ ಎಡವಿ ಬಿದ್ದಾಗ ಮೇಲಕ್ಕೆ ಎತ್ತಿ ಸುಖ ದುಃಖದಲ್ಲಿ ಭಾಗಿಯಾಗಿ ಜೊತೆ ಜೊತೆಯಾಗಿ ಸಾಗುವ ಪವಿತ್ರ ಸಂಬಂಧವೇ ನಿಜವಾದ “ಸ್ನೇಹ”.

ಇರಬೇಕು…….ಒಬ್ಬ ಗೆಳೆಯ/ಗೆಳತಿ,  

ನೋವುಗಳಿಗೆ ಸ್ಪಂದಿಸುತ್ತ, ತಪ್ಪುಗಳನ್ನು ತಿದ್ದುತ್ತ , 

ಖುಷಿಯನ್ನು ಹಂಚಿಕೊಳ್ಳುತ್ತಾ, ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ,

ಆಗಾಗ ರೆಗಿಸುತ್ತಾ, ಬದುಕಿಗೆ ಸ್ಪೂರ್ತಿ ತುಂಬುವಂತೆ,

ಇರಬೇಕು…….ಒಬ್ಬ ಗೆಳೆಯ/ಗೆಳತಿ ಇರಬೇಕು,

ಅದು ನಾನು ನಿಮ್ಮಲ್ಲಿ ಕಂಡೆ, ಏಷ್ಟೋ ಖುಷಿಯನ್ನುಪಟ್ಟೆ, ನನ್ನ ಎಲ್ಲಾ ನೋವುಗಳನ್ನು ನಿಮ್ಮೊಟ್ಟಿಗೆ ಸೇರಿದಾಗ ಮರೆತು ಸಂತೋಷದ ಕ್ಷಣಗಳನ್ನು ಅನುಭವಿಸಿದೆ.ಅತ್ತಾಗ ಕಣ್ಣೀರು ಒರೆಸಿದೆ ನನ್ನ ಸಂತೋಷದ ಕ್ಷಣಗಳನ್ನು ಹೇಳಿದಾಗ ನನಗಿಂತ ಹೆಚ್ಚು ಕುಷಿಪಟ್ಟವನು ನೀನು. ಗೊತ್ತಿಲ್ಲದವರ ಜೊತೆ ಸಲುಗೆ ಬೆಳಿಸಿ ಮೂವಿ, ಮಾಲು, ಎಂದು ಸುತ್ತಾಡುವಾಗ ಅದನ್ನು ಕಂಡು ಕೋಪಗೊಂಡವನು ನೀನು. ಆದಿನ ನೀನು ಇಲ್ಲಿ ಬಂದಿರುವ ಕೆಲಸ ಏನು ? ಇಲ್ಲಿ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದವನು ನೀನು. ನನ್ನ ಬದುಕಿನ ಗುರಿಯ ಬಗ್ಗೆ ತಿಳಿಸಿ ನನ್ನ ಬದುಕಿನ ಚಿಂತನೆಯ ದಿಕ್ಕನ್ನೇ ಬದಲಿಸುವಂತೆ ಮಾಡಿದವನು ನೀನು…

ಇವನು ತುಂಬಾ ಸ್ವಾಭಿಮಾನಿ,  ಒಮ್ಮೊಮ್ಮೆ ಕಡು ಕೋಪಿಷ್ಟ,

ಆದರೂ ನನಗೆ ತುಂಬಾ ಇಷ್ಟ, ಇನ್ನೂ ಹೇಳೋಕೆ ಕಷ್ಟ.

ನಿನ್ನ  ಬಳಿ ಯಾವುದೇ ವಿಷಯವಾದರೂ  ಮೊದಲು ನಿನ್ನ ಬಳಿ ಹೇಳಬೇಕೆಂದು ಹಪಿಹಪಿಸುವಳು ನಾನು. ನಿನ್ನ ಸ್ನೇಹದಿಂದ ಏಷ್ಟೋ ಪ್ರೀತಿಯನ್ನು ಗಳಿಸಿದ್ದೇನೆ, ಈ ಸ್ನೇಹ ಹೀಗೆ ಇರಲಿ ಎಂದು ಆಶಿಸುವೆನು ನಾನು….

ಪರಿಚಯವಾಗಿದ್ದು ಆಕಸ್ಮಿಕವಾದರು ಸ್ನೇಹ ಶಾಶ್ವತವಾಗಿರಲಿ.

ಜೀವನ ಕರೆದುಕೊಂಡು ಹೋಗುವ ಕಡೆ ನಾವು ಹೋಗದೆ, ನಾವು ಹೋಗುವ ಕಡೆ ಜೀವನ ಕರೆದುಕೊಂಡು ಹೋಗಬೇಕು ಇದುವೇ ಜಾಣತನ ಗೆಳೆಯ …. ಇದು ನಾವಗಬೇಕು ಎಂದು ಅಶಿಸುತ್ತ

ನಿನ್ನ ಮುಂದಿನ ವಿದ್ಯಾಭ್ಯಾಸದ ಪಯಣ ಉತ್ತಮ ಪ್ರಗತಿಶೀಲದ ನಿಟ್ಟಿನಲ್ಲಿ ಸಾಗಲಿ ಎಂದು ಶುಭಹಾರೈಸುವೆ ಗೆಳೆಯ….

ಇಂತ ಸುಂದರ ಸ್ನೇಹ ಸಿಕ್ಕಿದ್ದು ಈ ಕಾಲೇಜು ನನಗೆ ನೀಡಿದ ಸುಂದರ ಉಡುಗೊರೆಯಾಗಿದೆ… ಅದಕ್ಕಾಗಿ ನಾನು KAPMC ಗೆ ಧನ್ಯವಾದ ಅರ್ಪಿಸುತ್ತೇನೆ

“ಸ್ನೇಹಿತರ ದಿನದ ಶುಭಾಶಯಗಳು”

ಅರ್ಪಿತ. ಸಿ

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್ಶಿವಮೊಗ್ಗ

ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

Image Credit: Anikethana S

ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

ಪ್ರೇರಣೆಯ ಹಾದಿಯಲಿ ಅಭಿಲಾಷೆಯ ಅಮಲಿನಲಿ,

ಅಮೋಘ ಹಾಗೂ ನವ್ಯವಾದ ಸಾಧನೆಯ ಸಾಧಿಸಲು

ವಿನಯವನ್ನು ಮಾಲೆಯನ್ನಾಗಿಸಿಕೊಂಡೆ.

ಅನಿಕೇತನನಾಗಲು ಶ್ರೇಯೆಯ ಶೃತಿಯನ್ನು ಹಿಡಿದು

ನಿತ್ಯವೂ ರಜಿಯನ್ಹಾಕದೆ ‌ಆಲಯವನ್ಹೊಕ್ಕು

ಗಾನದೇವಿ ಸರಸ್ವತಿಗೆ ಪ್ರಥಮವಾಗಿ ಕಾವ್ಯಪಲ್ಲವಿಯ

ಸಂಗೀತಸುಧೆಯನರ್ಪಿಸಿ ಚೈತನ್ಯಗೊಳಿಸಿ

ವಿದ್ಯುತ್ಸಂಚಯನಗೊಳಿಸುವ ಮದೀರ್ಮೋಹಗಳನ್ನು ಮಸ್ತಿಷ್ಕದೊಳಗೆ ನಂದಿಸಿ

ಆಕಾಶದೊರೆಯ ಶೋಭೆಯನ್ನು

ಮನೆಯೊಳಗಿನಭೂಮಿಕೆಗಾಹ್ವಾನಮಾಡಿ ಸುವರ್ಣನಿಧಿಯನ್ನಾಗಿಸಿ

ದೀಪಿಕೆಯ ದೀಪ್ತಿಯನು ಪ್ರಜ್ವಲಗೊಳಿಸಿ

ರಂಗೋಲಿಯ ಮಂಜುಸುರೇಖೆಗಳನ್ನಿಟ್ಟು ಮನುವಂತರದ ಯುಗದಲಿ

ಚಂದನ-ಸಿಂಧೂರವನಿಟ್ಟು ಗಾಯತ್ರಿಯನು ಮಂತ್ರದಿಂದ ರಮಿಸಿ

ನಂದಿನಿಯ ಪವಿತ್ರತೆಯನ್ನು ಜಾಹ್ನವಿಯೊಂದಿಗೆ ವೇಣಿಸಂಗಮಗೊಳಿಸಿ

ಶಶಿಕಲಾಧರನಾದ ಮಲ್ಲಿಕಾರ್ಜುನ ಲಿಂಗಾಭಿಷೇಕವನು ಮಾಡಿ

ನಯನಗಳನ್ಮುಚ್ಚಿ ರಾಜೇಶ್ವರಿಯ ಅವಧಾನಿಸುತ

ಮೃಣಾಲಿನಿಯನ್ನು ತೆರೆದು ತೇಜಸ್ವಿಯಂತೆ ಮೈಯೊಲಿಯುತ

ಎದ್ದು  ಸ್ವಾತಿ ಮಳೆಯ ಹನಿಗಳು ಜೀವಿತವಿರುವ

ಮಧುಮುಟ್ಟದ ದಿವ್ಯ ಬಬ್ಬಲಿತ ಪುಷ್ಪಗಳನ್ನು

ಜಾನುವಾರುಗಳಿಗಾಹಾರವನಾಗಿ ಅರ್ಪಿಸಿ ಪ್ರಾಣವನ್ನು ಸಡಿಲಗೊಳಿಸಿಕೊಂಡು

ಪೈಗಳ ಕಾಲೇಜಿನಲ್ಲಿ ಇಂತಹ ಅಮೂಲ್ಯ ಸ್ನೇಹಿತರ ನಡುವೆ

ನಾನು ಸದಾ ರಕ್ಷಿತನಾಗಿರಲಿ ಎಂದು ಬೇಡಿಕೊಳ್ಳುವೆ.

 

ರಕ್ಷಿತ್.  ಹೆಚ್. ಆರ್

ದ್ವೀತಿಯ ಬಿ ಎ ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ಅವನ ತರಗತಿಯ ಸುಮಾರು 60 ಕ್ಕೂ ಹೆಚ್ಚು ಬಿ.ಎ ಮತ್ತು ಬಿ.ಎಸ್.‌ಡಬ್ಲ್ಯೂ. ವಿಧ್ಯಾರ್ಥಿಗಳ ಹೆಸರಿನಲ್ಲೇ ಈ ಪದ್ಯ ರಚಿಸಲಾಗಿದೆ. 

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

ಅಮ್ಮ ಎನ್ನುವ ಸಂಭ್ರಮ

ಅಮ್ಮ ಎನ್ನುವ ಸಂಭ್ರಮ

ಅಕ್ಕರೆಯಿಂದ ಆಶೀರ್ವದಿಸಿ ಆನಂದಿಸಿ ಅಪ್ಪಿಕೊಳ್ಳುವವಳೇ ಅಮ್ಮ…

ನನ್ನೆಲ್ಲ ನೋವಿಗೆ ನಗುವಾಗಿ ನನ್ನೆಲ್ಲ ಗೆಲುವಿಗೆ ಗುರುವಾಗಿ ನನ್ನೆಲ್ಲ ಭಾವಕ್ಕೆ ಮಗುವಾಗಿ ಸ್ಪಂದಿಸುವವಳೇ ಅಮ್ಮ…

ನನ್ನೆಲ್ಲ ನೆನಪುಗಳಲ್ಲಿ ಅಚ್ಚಳಿಯದೆ ಅಚ್ಚಾಗಿರುವವಳು ನನ್ನಮ್ಮ…

ನನ್ನೆಲ್ಲ ಕನಸನ್ನ ನನಸಾಗಿಸುವ ಹಾದಿಯಲ್ಲಿ ಕಠೋರತೆಯ ಮೆಟ್ಟಿಲನ್ನ ಮೆಟ್ಟಿ ನಿಂತವಳು ನನ್ನಮ್ಮ…

ಗುರುವಾಗಿ, ಗೆಲುವಾಗಿ, ವರವಾಗಿ, ಪರವಾಗಿ, ನನಗೆ ಸರಿಯಾಗಿ ನಿಂತವಳವಳೇ ನನ್ನಮ್ಮ……

ವಿದ್ಯಾಶ್ರೀ , ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,

ಸ್ತ್ರೀ ನಿನ್ನ ಹೊಗಳಲು ಬೇರೆ ಪದಗಳುಬೇಕೆ “ಅಮ್ಮ” ಎಂಬ ಎರಡಕ್ಷರದ ಪದವೇ ಸಾಕೆ….

ಸುಪ್ರಿಯಾ L, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,

ಅಮ್ಮಾ ಎಂದಾಕ್ಷಣ ಕಣ್ಣಂಚಲ್ಲಿ ಆ ಪ್ರೀತಿ ಮಮತೆ ವಾತ್ಸಲ್ಯ ಎಲ್ಲವೂ ಒಂದು ಬಾರಿ ಪಟದಂತೆ ಹಾಸಿ ಹೋಗುತ್ತದೆ.

ಆದರೆ ಇದೆಲ್ಲದರ ಹೊರತಾಗಿ ಅಮ್ಮಾ ಎಂದರೆ.. ಮಾಂಸದ ಮುದ್ದೆಗೆ ಜೀವನಿತ್ತವಳು, ಜೀವಕ್ಕೆ ಜನುಮನಿತ್ತವಳು,

ಆ ಜೀವವು ಹೇಗೆ ಜೀವನ ನಡೆಸಬೇಕೆಂದು ದಾರಿ ತೋರಿದವಳು ಬಿದ್ದಾಗ ಎದ್ದೇಳು ಕುಗ್ಗಬೇಡ ಮುನ್ನುಗ್ಗು ಎಂದು ಹೇಳಿದವಳು..

ಗೆದ್ದಾಗ ಖುಷಿಪಟ್ಟು ಬೆನ್ನುತಟ್ಟಿ ಹಿಗ್ಗಬೇಡ ಎಂದು ಕಿವಿಮಾತು ಹೇಳಿದವಳು..

ಕಂದನ ಖುಷಿಯಲ್ಲಿ ತಾ ಸಂತಸಪಟ್ಟಳು. ಕಂದನ ದುಃಖದಲ್ಲಿ ತಾ ಅತ್ತವಳು…

ಅಮ್ಮಾ ಎನ್ನುವ ಎರಡು ಅಕ್ಷರಕ್ಕೆ ಸಾಕ್ಷಿಯಾದವಳು.

ಪ್ರಣಮ್ಯ B M, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,

ಅಮ್ಮನ ಪ್ರೀತಿಗೆ ಆಕಾಶದಷ್ಟು ಮಿತಿಯುಂಟೆ?

ಅಮ್ಮನ ಕರ್ತವ್ಯಕ್ಕೆ ದೇವರೇ ಕೈ ಮುಗಿದದ್ದು ಗೊತ್ತೇ?

ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ಅಮ್ಮ,

ಅವಳಿಂದಾನೇ ಜೀವರಾಶಿಗಳ ವಂಶ ಬೆಳೆಯುವುದಮ್ಮ,

ಭದ್ರತೆಯ ಭಾವ ನಿರಾಳ ಮನಸ್ಸು ಭವಿಷ್ಯದ ಕನಸು,

ಸುಗಮ ಉಸಿರಾಟಕ್ಕೆ ಅವಳ ಪ್ರೀತಿಯೇ ಸೊಗಸು,

ಈ ಪ್ರತಿ ಉಸಿರಿಗೂ ಅಮ್ಮನ ಋಣವಿದೆ,

ಅಮ್ಮನಿದ್ದರೆ ಯೋಧನಷ್ಟು ಶಕ್ತಿ ಇದೆ,

ಆ ದೇವರಿಗೂ ಅಮ್ಮ ಬೇಕು,

ಆ ಅಪ್ಪುಗೆಯ ತಲೆ ನೇವರಿಸುವ ಕೈಗಳು ಬೇಕು,

ಅಮ್ಮನ ಮಾತು ಸುಳ್ಳನ್ನು ಸತ್ಯ ಮಾಡೀತು!

ನಂಬಿಕೆಯ ಆತ್ಮಕೆ ಬುನಾದಿ ಆದೀತು!

ನೋವಿನಲ್ಲೂ ದೇವರಿಗಿಂತ ಮೊದಲು ಅಮ್ಮ ಬಂದಾಳ,

ಇದು ಮನುಷ್ಯ ಸಂಕುಲದ ಎಲ್ಲಾ ಜೀವಿಗಳ ಜೀವಾಳ..

ಸಾಂಘವಿ ಆರ್ ಶಂಕರ, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,

ತ್ಯಾಗಮಹಿ ತಾಯಿ

ತಾಯಿ ಎನ್ನುವುದಕ್ಕಿಂತ “ಅಮ್ಮ”, ಈ ಪದ ಮನಸ್ಸಿಗೆ ಹೆಚ್ಚು ಹತ್ತಿರ.

ನಮಗೆಲ್ಲ ತಿಳಿದಿರುವ ಹಾಗೆ ನನ್ನಮ್ಮ,,ನಿಮ್ಮಮ್ಮ ಹಾಗೂ

ಎಲ್ಲರ ಅಮ್ಮಂದಿರು ತ್ಯಾಗಮಹಿಯರೇ, ನಮ್ಮ, ನಿಮ್ಮನ್ನು ಈಗಲೂ ಕೂಸಿನಂತೆ

ಪ್ರೀತಿಸುವ, ನಮ್ಮ ಕ್ಷೇಮಾಭಿವೃದ್ಧಿಗಾಗಿ  ಸದಾ ಚಡಪಡಿಸುವ  ತಾಯಿಯ ಗುಣ ಕೇವಲ

ಮಾನನಕುಲಕ್ಕೆ ಮಾತ್ರ  ಅನ್ವಯಿಸುವುದಿಲ್ಲ. ಪ್ರತಿಯೊಂದು ಜೀವಸಂಕುಲದಲ್ಲಿರುವ

 ತಾಯಿಯಲ್ಲು ಕಾಣಬಹುದಾಗಿದೆ. ಉದಾಹರಣೆಗೆ ,  ನಮ್ಮ ಮನೆಯಲ್ಲಿದ್ದ ಕೋಪಿಷ್ಟ ಹೆಣ್ಣು ಬೆಕ್ಕನ್ನೆ ತೆಗೆದುಕೊಳ್ಳುವ,

ಗುರ್ರ್ ಎನ್ನುತ್ತ,  ಸದಾ ತನ್ನದೆ ಪ್ರಪಂಚದಲ್ಲಿರುತ್ತಿದ್ದ ಅವಳು, ಈಗ ಎರಡು ಮರಿಗಳ

ತ್ಯಾಗಮಹಿ ತಾಯಿ. ತನ್ನ ನಿದ್ದೆ, ಆಹಾರ, ಆಟ, ಬೇಟೆ ಎಲ್ಲವನ್ನು ತ್ಯಜಿಸಿ ಹಗಲು ರಾತ್ರಿಯನ್ನದೆ

ತನ್ನ ಮರಿಗಳ ಕಾವಲು ಕಾಯುತ್ತ , ಪೋಷಣೆ ಮಾಡುತ್ತಿದ್ದಾಳೆ.  ತಾಯಿಯ ಬಗ್ಗೆ ಎಷ್ಟು

ಬರೆದರು ಸಾಲದು ಎಂದು ತಿಳಿದಿದ್ದರೂ ಈ ನನ್ನ  ಪುಟ್ಟ ಪ್ರಯತ್ನವನ್ನು ನನ್ನ ತ್ಯಾಗಮಹಿ ತಾಯಿಗೆ

ಅರ್ಪಿಸುತ್ತಿದ್ದೇನೆ.

ರಾಧಿಕ.ಎಸ್. ಜೋಷಿ,  ಅಂತಿಮ ವರ್ಷ, ಬಿ.ಎ, ವಿದ್ಯಾರ್ಥಿನಿ, 

ನಮ್ಮೆಲ್ಲ ಚೇಷ್ಟೆ, ಕಾಟ ಸಹಿಸ್ಕೊಳೋ,

ಕೇಳ್ದೆ ಇದ್ರು ಎಲ್ಲ ಕೊಡೋ “ಕರುಣಾಮಯಿ”. ♥

ಸ್ವಾರ್ಥ ಅಂದ್ರೇನು ಅಂತನೆ ಗೊತ್ತಿಲ್ದೆ ಇರೋ ಜೀವ..   

ಅದುವೇ ಅಮ್ಮ…  ಅಮ್ಮ ಅಂದ್ರೆ ಸರ್ವಸ್ವ”. 

ಮಧುಶ್ರಿ, ದ್ವೀತಿಯ ಬಿ ಎ ,  ವಿಧ್ಯಾರ್ಥಿನಿ ,

ನೋವುಂಡಿ ನಲಿವು ನೀಡಿದವಳು ನನ್ನಮ್ಮ 🤰

ನನ್ನ ನಗುವ ಕಂಡು, ಜಗವ ಮರೆತಳು

ನನ್ನೊಲವಿನಮ್ಮ 🤱

ಸ್ವಾರ್ಥವೇ ಇಲ್ಲದ ಸ್ಫೂರ್ತಿಯ ಒಡತಿ

ಆ ನನ್ನ ಚಿಲುಮೆಯ ಅಮ್ಮ 🧎‍♀️

ಕಂಡ ಕನಸೆಲ್ಲವ ನನಗೆಂದೆ ಧಾರೆ ಎರೆದ ನನ್ನೊಲವಿನ ಅಮ್ಮ 🚶‍♀️

ತನ್ನ ಬೆವರಿನೊಳಗೆ

ಭಾವನೆಗಳನ್ನು ತುಂಬಿ ಸುರಿದವಳು ನನ್ನಮ್ಮ 🤩

ಪ್ರತೀ ಹೆಜ್ಜೆ ನಾ ನಡೆದ ಜಾಗದಲ್ಲೇ

ತನ್ನ ಜಗವ ಕಾಣುವಳು ನನಮ್ಮ 👣

ಆಸೆಗಳೊಂದಿಗೆ ಅವಕಾಶಗಳನ್ನು

ಆಮಂತ್ರಣವಾಗಿ ಕೊಡುತಿಹಾಳು ನನ್ನಮ್ಮ 💆

ಸರ್ವಸ್ವವನೆ ಸಾಂಗವಾಗಿ

ಸಮರ್ಪಿಸಿದವಳು ನನ್ನಮ್ಮ 💫

ಅಣಕಿಸಿದವರ ಮುಂದೆಯೇ

ಅರಳುವ ಹೂವಗ ಬೇಕೆಂದು

ಹರಸಿದವಳು ನನ್ನಮ್ನ 🦾

ಹಡೆದವಳಾಗಿ, ಗೆಳತಿಯಾಗಿ,

ಮನೆಯ ಒಡತಿಯಾಗಿ,

ಅಂದಿಗೂ, ಇಂದಿಗೂ, ಎಂದೆಂದಿಗೂ ಇರುವೇ

ನನ್ನ ನಲ್ಮೆಯ ತಾಯಿಯಾಗಿ. 😘

🥰ಅಮ್ಮಂದಿರ ದಿನದ ಹಾರ್ಧಿಕ ಶುಭಾಶಯಗಳು 💫

ಭಾರ್ಗವಿ G R , ಪ್ರಥಮ ಬಿ ಎ, ವಿದ್ಯಾರ್ಥಿನಿ,

ನನ್ನ ಪಾಲಿಗೆ  ದೇವರು ಅಂದರೆ ನನ್ನ ಅಮ್ಮ ಎಲ್ಲ ತೊಂದರೆಗಳಿಂದ  ಪಾರುಮಾಡುತಾರೆ ಈ ನನ್ನ ಅಮ್ಮ 🤱🏻        

ನೀನು ನನ್ನ ದೇವರು❤️🤱🏻

ನಮಗಾಗೇ ಸುರಿಸುವೆ ಬೇವರು

ನಮನ್ನು ಕಾಯಲು ನೀನು ಯಾವಾಗಲು ತಯಾರು

ನೀನೇ  ನಮಗೆ ಪವರು⚡

ಅಮ್ಮಂದಿರ ದಿನದಲೀ ಕಟುತ್ತೆವೇ ನಿಮಗೆ ಪ್ರೀತೀಯ ತೇರು 🗼❤️

ಉಸಿರು ನಿಲ್ಲೋ ತನಕ ಪ್ರೀತೀಸೋ ಒಂದು  ಜೀವ ಅಂದರೆ  ಅದು ತಾಯೀ  ಮಾತ್ರ

ಎಲ್ಲರಿಗೂ ಅಮ್ಮಂದಿರ  ದಿನದ ಶುಭಾಶಯಗಳು🤱🏻

ಭವಾನಿ S U, ಪ್ರಥಮ ಬಿ ಎ, ವಿದ್ಯಾರ್ಥಿನಿ,

ಹೊರುವಳು ನಿನ್ನ ಗರ್ಭದಲಿ ನವಮಾಸ,

ಕಾಣಹೋರಾಟಳು ನಿನ್ನೆಡೆಗೆ ನೊರೆಂಟು ಕನಸ,

ಮರೆವಳು ಅವಳ ನೋವ ನೋಡಿ ನಿನ್ನ ನಗುವಿನ ಮಂದಹಾಸ,

ಅರ್ತಾಯಿಸುವಳು ಪ್ರಪಂಚಾವ ಸಮಾಜದೊಂದಿಗ ಸೇನೆಸಾಡುತ,

ಬೆಂಬಲಿಸುವಳು ನಿನ್ನ ಕನಸುಗಳಿಗೆ ರೆಕ್ಕೆಯ ಕಟ್ಟುತ,

ಪ್ರತಿ ಕ್ಷಣವು ನಿನಗಾಗಿ ಚಡಪಡಿಸುತಾ,

ಸ್ವಾರ್ಥಿಗಳ ಪ್ರಪಂಚದಲಿ ನಿನಗಾಗಿ ಪ್ರಾರ್ಥಿಸುತ…..

ಅಮ್ಮ ಈ ಪದವೇ ಒಂದು ಅದ್ಬುತ..

ಸುಷ್ಮಿತಾ P,  ಪ್ರಥಮ ಬಿ ಎ, ವಿದ್ಯಾರ್ಥಿನಿ,

ಹುಟ್ಟುವಾಗ “ಅಮ್ಮ “

ಅಳುವಾಗ “ಅಮ್ಮ “

ನಗುವಾಗ “ಅಮ್ಮ “

ಬಿದ್ದಾಗ “ಅಮ್ಮ “

ನಾವು ಎಲ್ಲಿದ್ದರೂ ಯಾವಾಗಲೂ ಜೊತೆ ಇರುತ್ತಾರೆ  “ಅಮ್ಮ “

ಕಾರಣ ಅವರಿಂದಲೇ ಸಿಕ್ಕಿದೆ ನಮಗೆ ಈ “ಜನ್ಮ “

ಸುದೀಪ. ಡಿ, ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ, 

ಕಷ್ಟವೇ ಬಂದ್ರು, ಸುಖನೆ ಇದ್ರೂ  ನಿನೊಂದಿಗಿರುವವಳು ನೆರಳಿನಂತೆ…

ನೀ ಓಡಿದರು,  ನೀ ನಡೆದರು

ನಿನ್ನ ಹಿಂದೆಯೇ ಬರುವಳು

ಹೆಜ್ಜೆ ಗುರುತಿನಂತೆ.🤱

 ತರುಣ್ T S, ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ

ಮೋದಮೊದಲು ಅಂಬೆಗಾಲಾಕುತ ನಿನ್ನನೇ ಹುಡುಕುತಲಿದ್ದೇನು ನಾನು,

ನಂತರ ಗೋಡೆಯನ್ನು ಹಿಡಿದು ನಡೆಯಲು ಕಲಿಸಿದವಳು ನೀನು,

ಆಮೇಲೆ ನಿನ್ನ ಸೀರೆಯ ಸೆರಗನ್ನು ಹಿಡಿದು ನಿನ್ನಿಂದ ಓಡಾಡಿದೇನು ಅಮ್ಮ,

ಎಲ್ಲಿ ನನ್ನ ಕಾಲಿಗೆ ನೋವಾಗುವುದೆಂದು ನಿನ್ನ

ಮಡಿಲಲ್ಲಿ ಕೂರಿಸಿಕೊಂಡು ಸುತ್ತಿದವಳು ನೀನು

ನೀ ಜೊತೆಯಲಿ ಇರುವೆ ಎಂಬ ನಂಬಿಕೆಯಿಂದಲೇ ನಾ ಬೆಳದಿರುವೆ

ಆದರೂ,

ನೀನಿಲ್ಲದೆ ನನ್ನ ಜೀವನ ಕಾಣುವುದು ಅನಾಥ ಶವವಾಗಿ,

ಈ ಭೂಮಿಯಲ್ಲಿ ನನಗೆ ಜನ್ಮ ನೀಡಿದ ನೀನು ಸಹೃದಯಿ….ಅಮ್ಮ!

ಉಸಿರು,ಹೆಸರು,ಬದುಕು ಕೊಡುವವಳು__!

ಹಸಿದಾಗ ಹಸಿವ ನಿಗಿಸುವವಳು__!

ಎಲ್ಲವನ್ನೂ ಸಹಿಸಿ ಸಲಹುವವಳು ನಮ್ ಅಮ್ಮ!

ನಾವು ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸುವವಳು

ನಾವು ಸೋತಾಗ ಆತ್ಮಸ್ಥೈರ್ಯ ತುಂಬುವವಳು

ಕನಸಿನಲ್ಲು ನಮ್ಮನು ಕಾಯುವವಳು……ಅಮ್ಮ_!

“ನಾನೆಂದೂ ನಿನಗೆ ಚಿರಋಣಿ _ಅಮ್ಮಾ!!”

ಅಂಜಲಿ ನಾ ಜಲಾಟಿಗೌಡ್ರ, ಪ್ರಥಮ ಬಿ ಎ, ವಿದ್ಯಾರ್ಥಿನಿ,

ನನ್ನ ಗುರು ನನ್ನ ತಾಯಿ……..

ಒಂದು ಪುಟ್ಟ ಕಥೆ, ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರಥಮ ಪಿಯುಸಿ ಅಡ್ಮಿಷನ್ ಗಾಗಿ 25 ಸಾವಿರ ರೂಪಾಯಿಗಳನ್ನು ಎರಡರಿಂದ ಮೂರು ದಿನಗಳಲ್ಲಿ ಕೊಡಲು ನನ್ನ ಅಮ್ಮನಿಗೆ ಹೇಳಿದ್ದೆ, ದುರಾದೃಷ್ಟವಶಾತ್ ಅದನ್ನು ಹೊಂದಿಸಲು ನನ್ನ ತಾಯಿಗೆ ಆಗಲಿಲ್ಲ, ಅದಕ್ಕಾಗಿ ನಾನು ಬಾಯಿಗೆ ಬಂದಂತೆ ನಮ್ಮಮ್ಮನಿಗೆ ಬೈದು ಬಿಟ್ಟೆ, ಇದಾಗಿ ಎರಡುವರೆ ವರ್ಷ ಕಳೆಯಿತು ಪ್ರಥಮ ವರ್ಷದ ಡಿಗ್ರಿಗೆ ಅಡ್ಮಿಶನ್ ಆಗಿ ಮನೆಗೆ ಬಂದು ಕುಳಿತಾಗ ನನ್ನ ತಾಯಿ ಸಮಾಧಾನದಿಂದ ಕೇಳಿದರು “ಭವಿಷಃ 2 ವರ್ಷ ಕಳೆದಿರಬಹುದು, ನಿನಗೆ ಈಗ 25000 ದ ಬೆಲೆ ಗೊತ್ತಾಯ್ತಾ ಪುಟ್ಟ” ಎಂದು,ಅವತ್ತು ನನ್ನ ಮನಸ್ಸಿಗೆ ಬೇಜಾರಾಗುತ್ತದೆ ಎಂದು ಈ ಪ್ರಶ್ನೆಯನ್ನು ನಮ್ಮಮ್ಮ ಕೇಳದೆ ಇದಿದ್ದರೆ ನನಗೆ ನನ್ನ ತಪ್ಪಿನ ಅರಿವೇ ಆಗುತ್ತಿರಲಿಲ್ಲ,ಈ ಪ್ರಶ್ನೆಯನ್ನು ಕೇಳಿದಾಗ ನನಗೆ ಒಮ್ಮೆಲೆ ಯಾರೋ ಕೆನ್ನೆಗೆ ಹೊಡೆದಂತೆ ಆಯಿತಾದರೂ ನಮ್ಮಮ್ಮನಿಗೆ ಅಳುಕುತಲೇ ಉತ್ತರ ಕೊಟ್ಟೆ,”ನನಗೆ 25000 ದುಡಿಯಲು ಒಂದಷ್ಟು ತಿಂಗಳುಗಳೇ ಬೇಕಾಯಿತು, ಆದರೆ ನಾನು ನಿನಗೆ ಎರಡರಿಂದ ಮೂರು ದಿನದಲ್ಲಿ ಅಷ್ಟೊಂದು ಹಣ ಕೊಡಲು ಕೇಳಿದರೆ ನೀನು ಎಲ್ಲಿಂದ ಕೊಡುತ್ತೀಯಾಮ್ಮ, ಅವತ್ತು ದುಡ್ಡಿನ ಬೆಲೆ ನನಗೆ ಗೊತ್ತಿರಲಿಲ್ಲ, ನೀನು ನನ್ನನ್ನು ಇಲ್ಲಿಯತನಕ ಓದಿಸುವುದಕ್ಕೆ ಎಷ್ಟು ಕಷ್ಟಪಟ್ಟಿದ್ದೇ ಅಂತಲೂ ಗೊತ್ತಿರಲಿಲ್ಲ, ಅವತ್ತಿನ ಎಲ್ಲ ಮಾತುಗಳಿಗೂ ನನ್ನ ಕ್ಷಮಿಸಮ್ಮ” , ಎಂದು ಕೇಳಿದೆ, ತಾಯಿಯ ಗುಣವೇ ತಮ್ಮ ಮಕ್ಕಳು ಏನು ತಪ್ಪು ಮಾಡಿದರೂ ತಿದ್ದಿ ಬುದ್ಧಿ ಹೇಳುವುದು, ನಮ್ಮಮ್ಮ ಒಂದು ನಿಮಿಷವೂ ನನ್ನ ಮೇಲೆ ಬೇಜಾರು ಮಾಡಿಕೊಳ್ಳದೆ ನನ್ನ ಕ್ಷಮಿಸಿದರು.

ಇದರಿಂದ ಕಲಿತದ್ದು ನಾವು ಎಷ್ಟೇ ಕಲಿತರೂ, ಏನನ್ನೇ ದುಡಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ಅವನ್ನೆಲ್ಲ ತಂದು ನಮ್ಮ ತಾಯಿಯ ಪದತಲಕ್ಕೆ ಹಾಕಿದಾಗ ಅವರ ಅನುಭವದ ಹತ್ತು ಪರ್ಸೆಂಟ್ ಸಹ ಆಗಲಾರದು.

ನನ್ನ ತಾಯಿಗೂ ಮತ್ತು ನನ್ನ ದೇಶದ ಎಲ್ಲ ತಾಯಂದಿರಿಗೂ  ತಾಯಂದಿರ ದಿನದ ಒಂದು ದಿನದ ಶುಭಾಶಯವಲ್ಲಾ, ಬದುಕಿರುವವರೆಗೂ ಪ್ರತಿದಿನವು ಶುಭಾಶಯಗಳು ಮತ್ತು ಶತ ಶತ ನಮನಗಳು ………..🙏🙏🙏

ನಾಗೇಂದ್ರ T R , ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ, 

To her,

Who always makes me feel

I’m exceptional.

Needless to verse,

You arrayed all the good.

You ushered,

How’s to be

Sturdy in life.

Going against the odds,

You taught to be

Adamant about the desires.

Couldn’t I be venturous,

Without you.

‘You’, you are unexampled.

Devika, 2nd Year MSc Psychology

 

I Know THANK YOU is

Such a small world for all

That you have done for me.

I cannot promise

You all the happiness

In the world,

But I will try my best to keep

You happy and make sure not

To bring a single tear to your eyes.

Love you lot Amma

Happy Mother’s day

Sinchana J S,  1st Year BA,

Maa,

With you by my side, every hurdle sails with ease ,

with you by my side even the thirst quenches without water,

with you by my side my appetite is knocked with your nourishment of care, with you by my side discomforts are bashed with comforts,

with you by my side my miseries are led to the path of agony,

with you by my side the snow enfolds me with warmth of your affection,

with you by my side the world ceases to exist,

with you by my side happiness is seated with it’s broken legs,

with you by my side the nightmares appear to be daydreams ,

with you by my side make my desires dissolve,

with you by my side, your presence makes the paradise shy away from its  contentment,

with you by my side makes everything in my life better just by being in it! No number of births can suffice my gratitude towards you, and the only way out is to be thankful to the lord for bestowing me with a treasure like you!! 

You are the most precious art and a blessing that i have ever laid my eyes on!!

Happy mother’s day maa!!

Ashwini M K, Final Year BA,

Amma, 

The word is itself filled with love and grace you offer, 

Those times when you starve for me and receive me with a good mood, 

Those days when you pour your heart out and cook delicious food, 

Those minutes where you spend thinking of me, 

How can I repay all of them? 

 All I can say is my love for you shall never end! 

Your loving Daughter

ANUPAMA S A R, 2nd Year MSc Psychology,

ಇವತ್ತು ಅಮ್ಮಂದಿರ ದಿನಾಚರಣೆ, ಈ ಒಂದು ದಿನ ಅವಳ ಸಂಭ್ರಮಕ್ಕೆ ಸೀಮಿತ ವಾಗದೆ ವರ್ಷದ 365 ದಿನಗಳು ಅವಳನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ,

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಮ್ಮನನ್ನು ಪ್ರೀತಿಯಿಂದ ಅಕ್ಷರಗಳಲ್ಲಿ  ವರ್ಣಿಸಿದ್ದಾರೆ, ಅವರ ಈ ಸಣ್ಣ ಪ್ರಯತ್ನಕ್ಕೆ ಅಭಿನಂದನೆಗಳು,

ಧನ್ಯವಾದಗಳೊಂದಿಗೆ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

Image 1-4 Credit: Google.com / Gubbi – AMMA-YouTube 

Image 5: Pranamya B M