The Room in my House that I Love the Most

Image Credit: Manish S

yellow, musky walls
cracking, just the tiniest bit
from the corners –
the ceiling fan bumping
into my head when i stand
on the bed, i am Deodar;

drums filled with clothes, cushions,
cardboard, cups, record albums,
sit next to the entrance –
their lids are my ladders,
the corner my Mario playground;

the floor, freshly layered with mud,
my bare feet,
on the palms of earth –
the brown resembles my toes,
my eyes, my hair, my skin,
this is the womb of nature;

an orange light bulb,
hanging on the left wall
is my siren,
i am hiding in this room
from the footsteps above me,
this room is my sanctuary,
my playground, my library,
my only remaining memory
of the kachcha house on the hill;

Mr. Manish S

Assistant Professor
Dept. of Psychology 

Kateel Ashok Pai Memorial College, Shivamogga

ಮಗುವಾಗು ಮನವೇ………!

Image Credit: Google.com

ಪ್ರೀತಿಯ ಓದುಗರೇ,

ಕನ್ನಡ ಚಿತ್ರರಂಗದ ಮೇರುರತ್ನಗಳಲ್ಲೊಬ್ಬರಾದ ಡಾ. ಅಶೋಕ್ ಪೈ ರವರ ಸುವರ್ಣಹಸ್ತದಿಂದ ವಿರಚಿತ ಕಥಾಸಂಕಲನಗಳಲ್ಲಿ ಒಂದಾದ ಸುರೇಶ್ ಹೆಬ್ಳೀಕರ್ ನಿರ್ದೇಶಿಸಿದ ಕನ್ನಡದ ಅದ್ಭುತ ಮನೋವೈಜ್ಞಾನಿಕ ಉಪನ್ಯಾಸ ನಾಟಕ “ಪ್ರಥಮ ಉಷಾಕಿರಣ”. ಪ್ರಸ್ತುತ ಚಲನಚಿತ್ರವು ಮಕ್ಕಳ ಮಾನಸಿಕ ಬದಲಾವಣೆಯನ್ನು ಪ್ರಥಮ ಆದ್ಯತೆಯನ್ನಾಗಿಸಿಕೊಂಡು ವೈಶಿಷ್ಟ್ಯವಾಗಿ ಚಿತ್ರೀಕರಿಸಿದ್ದಾರೆ. ಪ್ರಸ್ತುತ ಸಿನಿನಾಟಕದಲ್ಲಿ ವಿದೇಶಿ ಸಂಸ್ಕøತಿಯ ಸಂಸ್ಕಾರಗಳಿಂದ ಬದಲಾದ ಒಬ್ಬ ತಂದೆಯ ಶಿಸ್ತು ಮತ್ತು ಅನೌಪಚಾರಿಕ ನಡತೆಗಳಿಂದ ಕಂಗೆಟ್ಟ ಆತನ ಇಬ್ಬರು ಮಕ್ಕಳ ಮೇಲಾದ ಮಾನಸಿಕ ದುರಾವಸ್ಥೆ ಶೋಷಣೆಯ ಪರಿಣಾಮವನ್ನು ಚಿತ್ರದ ಕೈಗನ್ನಡಿಯನ್ನಾಗಿ ರೂಪಿಸಿದ್ದಾರೆ.

ಆಧುನಿಕ ತಂತ್ರಜ್ಞಾನದಲ್ಲಿ ಮಕ್ಕಳಗತಿ ಅಧೋಗತಿ! ಏಕೆಂದರೆ ಸ್ವಲ್ಪವೂ ಹೊರಕೌಶಲ್ಯಗಳಲ್ಲಿ ತೊಡಗಿಕೊಳ್ಳದೆ ಶೈಕ್ಷಣಿಕ ಒತ್ತಡಕ್ಕೆ ಮಣಿದು ಬೆಟ್ಟವನ್ನು ತಲೆಯ ಮೇಲೆ ಹೊತ್ತಂತೆ ಕಾಣುವುದು ಅವರ ಮುಖ! ನಗರಗಳಲ್ಲಿ ಚಿಕ್ಕ ಮಗುವಿಗೆ ಕುಡಿಯುವ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ಆ ಮುಗ್ಧ ಮಗು ಗಾಡಿಯಲ್ಲಿ ಬರುತ್ತದೆ ಎಂದು ಹೇಳಿದಾಗ ಉಂಟಾಗುವ ನಗು ಹಾಗೂ ಆಶ್ಚರ್ಯವೇ ಹೇಳುತ್ತದೆ ಆಧುನಿಕ ತಂತ್ರಜ್ಞಾನ ಎಲ್ಲವನ್ನೂ ಬದಲಿಸಿದೆ ಎಂದು. “ಏನ್ ಕಾಲ ಬಂತಪ್ಪಾ, ನಮ್ ಕಾಲದಲ್ಲಿ ಹೀಗೆಲ್ಲಾ ಇರ್ಲಿಲ್ಲಾ!” ಎಂದು ನುಡಿಯುವ ಹಿರಿಯರ ಆಶ್ಚರ್ಯದ ಮಾತು ನಿಜ ಅನ್ಸುತ್ತೇ. ಚಲನಚಿತ್ರದ ವಿಷಯಕ್ಕೆ ಬಂದರೆ ಪ್ರಸ್ತುತ ಚಲನಚಿತ್ರವು 1990 ಇಸವಿಯಲ್ಲಿ, ಸುರೇಶ್ ಹೆಬ್ಳೀಕರ್ ಮುಖ್ಯಭೂಮಿಕೆಯಲ್ಲಿ, ಡಾ. ಅಶೋಕ್ ಪೈ ವಿರಚಿತ ಮತ್ತು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ ಅದ್ಭುತ ಚಲನಚಿತ್ರ “ಪ್ರಥಮ ಉಷಾಕಿರಣ”.

ಮುಖ್ಯ ಪಾತ್ರಗಳು:
ಸುರೇಶ್ ಹೆಬ್ಳೀಕರ್ – ಶ್ರೀಧರ್ ಆಗಿ ನಟಿಸಿದ್ದಾರೆ.
ಗೀತಾ _ ಶ್ರೀಧರನ ಪತ್ನಿಯಾಗಿ ನಟಿಸಿದ್ದಾರೆ.
ಗಿರೀಶ್ ಕಾರ್ನಾಡ್ _ ಮನೋವೈದ್ಯರಾಗಿ ನಟಿಸಿದ್ದಾರೆ.
ಉಷಾ ಮತ್ತು ಕಿರಣ್ ಶ್ರೀಧರನ ಇಬ್ಬರು ಮಕ್ಕಳಾಗಿ ತಮ್ಮ ನಟನಾ ಮುಖ್ಯಭೂಮಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಸ್ತುತ ಚಲನಚಿತ್ರದಲ್ಲಿ ಶ್ರೀಧರ್ ಒಬ್ಬ ಪ್ರಾಮಾಣಿಕ, ಬುದ್ಧಿವಂತ, ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ ಸಾಮಾನ್ಯ ಯುವಕ. ಮೂರು ವರ್ಷ ಹೊಸ ಕೆಲಸದ ಹುಮ್ಮಸ್ಸಿನೊಂದಿಗೆ ಅಮೇರಿಕಾಗೆ ತನ್ನ ಮಡದಿಯೊಂದಿಗೆ ತೆರಳಿದ ಆತ ಅಮೇರಿಕಾದ ನಡವಳಿಕೆ ಮತ್ತು ಸಂಸ್ಕøತಿಗೆ ಮರುಳಾಗುತ್ತಾನೆ. ಭಾರತಕ್ಕೆ ಮರಳಿದ ನಂತರ ತನ್ನ ನಡವಳಿಕೆ ಹಾಗೂ ಶಿಸ್ತನ್ನು ತನ್ನ ಎಳೆಯ ಮಕ್ಕಳ ಮೇಲೆ ಭಾರವನ್ನು ಹೇರುತ್ತಾನೆ. ಇದರಿಂದ ವಿಚಲಿತಗೊಂಡ ಇಬ್ಬರು ಮಕ್ಕಳು ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ. ಅದರ ಪರಿಣಾಮವಾಗಿ ವಿಚಿತ್ರವಾದ ನಡವಳಿಕೆಗಳನ್ನು ಪ್ರದರ್ಶಿಸತೊಡಗುತ್ತಾರೆ.

ವಿದೇಶಿ ಸಂಸ್ಕøತಿಗೆ ಬದಲಾದ ವ್ಯಕ್ತಿತ್ವ ಮತ್ತು ವರ್ತನೆಗಳು, ಶಾಲಾ ಪರಿಸ್ಥಿತಿ ಹಾಗೂ ಹಳ್ಳಿ ಶಾಲೆಯ ದುಸ್ಥಿತಿ, ಮಕ್ಕಳಲ್ಲಾಗುವ ಮಾನಸಿಕ ಬದಲಾವಣೆ ಹಾಗೂ ಪರಿಣಾಮಗಳು ಚಲನಚಿತ್ರದಲ್ಲಿ ಕಾಣಬಹುದಾದ ಪ್ರಮುಖ ಅಂಶಗಳಾಗಿವೆ. ಅಂತಿಮವಾಗಿ ಮಕ್ಕಳ ಮನೋವ್ಯಾಧಿಯನ್ನು ಅರ್ಥಮಾಡಿಕೊಂಡ ಪರಿಣಿತ ಮನೋಶಾಸ್ತ್ರಜ್ಞ (ಗಿರೀಶ್ ಕಾರ್ನಾಡ್) ರೊಬ್ಬರು ಅವರಿಬ್ಬರ ದುರವಸ್ಥೆಯ ಕಾರಣವನ್ನು ತಂದೆಗೆ ವಿವರವಾಗಿ ಅರ್ಥಮಾಡಿಸುತ್ತಾರೆ. ಹೀಗೆ ಉತ್ತಮ ಸಂದೇಶದೊಂದಿಗೆ ಮುಕ್ತಾಯವಾದ ನಾನು ಕಂಡಂತಹ ಅದ್ಭುತ ಚಿತ್ರ ಪ್ರಥಮ ಉಷಾಕಿರಣ ‘ಪೋಷಕರ ಹೃದಯ ಮಕ್ಕಳು’ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಕಹ್ಲಿಲ್-ಗಿಬ್ರನ್ ರವರ ಪ್ರಕಾರ ಮಕ್ಕಳು ಬಾಣ(ಶರ) ದಂತೆ ಹಾಗೂ ಪೋಷಕರು ಬಾಣವನ್ನು ಗುರಿಯೆಡೆಗೆ ತಲುಪಿಸುವ ಬಿಲ್ಲಿನಂತೆ ಇರಬೇಕು. ಏಕೆಂದರೆ ಬಿಲ್ಲು ಸದೃಢವಾಗಿ ತನ್ನನ್ನು ತಗ್ಗಿಸಿಕೊಂಡಷ್ಟು ಬಾಣವು ಕಠಿಣದೂರವನ್ನು ತಲುಪಿ ಗುರಿಯ ಕೇಂದ್ರವನ್ನು ಮುಟ್ಟುತ್ತದೆ.

ಪ್ರಸ್ತುತ ಚಲನಚಿತ್ರದಲ್ಲಿ ನಾನು ಹೆಚ್ಚಾಗಿ ಗಮನವಿಟ್ಟು ವೀಕ್ಷಿಸಿದ ಮನೋಹರ ದೃಶ್ಯವೆಂದರೆ ಹಿರಿಯರು ಮೊಮ್ಮಕ್ಕಳಿಗೆ ಹೇಳುವ ಧಾರ್ಮಿಕ ನೀತಿಯುಕ್ತ ಕಥೆ. ನಾನು ಈ ವಿಷಯವನ್ನು ಹೆಚ್ಚಾಗಿ ವಿಮರ್ಶಿಸಿದೆ ಏಕೆಂದರೆ ಇಂದಿನ ದಿನಗಳಲ್ಲಿ. ಆ ಸಂತೋಷದ ಕ್ಷಣಗಳು ತಂತ್ರಜ್ಞಾನದ ತುಳಿತಕ್ಕೆ ಸಿಕ್ಕಿ ಸತ್ತುಹೋಗಿವೆ. ನನ್ನ ಅನುಭವದಿಂದ ಹೇಳಬೇಕಾದರೆ ನನ್ನ ಅಜ್ಜ ಕೂಡ ನಾನು ಚಿಕ್ಕವನಿದ್ದಾಗ ಅನೇಕ ಧಾರ್ಮಿಕ, ವೈಚಾರಿಕ ಕಥೆಯಿಂದ ನನ್ನ ಕುತೂಹಲವನ್ನು ಕೆರಳಿಸಿ ತಣಿಸುತ್ತಿದ್ದರು. ಆದರೆ ಈಗ ಕಥೆಯೂ ಇಲ್ಲ, ಅಜ್ಜನೂ ಇಲ್ಲ! Only voot kids. ಈ ಚಲನಚಿತ್ರವು ನನ್ನನ್ನು ಇಂದಿನ ಪೋಷಕರ ವರ್ತನೆಯ ಕುರಿತು ವಿಚಾರ ಮಾಡುವಂತೆ ಮಾಡಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇಂದಿನ ದಿನಗಳು ನಿಜವಾಗಲೂ ಅಂದಿನಂತಿಲ್ಲ. ನಿಮ್ಮ ಅನುಮತಿಯಿದ್ದರೆ ನನ್ನದೊಂದು ಪುಟ್ಟ ಕಥೆ, ವಿದ್ಯಾಭ್ಯಾಸದ ನಂತರ ಹೊರದೇಶಕ್ಕೆ ಕೆಲಸಕ್ಕೆಂದು ಹೋದ ಒಬ್ಬ ಮಗನಿದ್ದ. ಒಮ್ಮೆ ಆತನ ತಂದೆ, ಮಗನಿಗೆ ತನ್ನ ಮರಣಕಾಲ ಸಮೀಪಿಸಿದೆ ಎಂದು ತಾನು ನಿನ್ನೊಮ್ಮೆ ನೋಡಬೇಕೆಂದು ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ಆ ಹುಡುಗನು ಹೇಳಿದನು. “Sorry dad, I am busy with my work”. . ಕೊನೆಗೆ ತಂದೆಯ ಮರಣನಂತರ ಸ್ನೇಹಿತರ ಕರೆಯನ್ನು ಸ್ವೀಕರಿಸಿ ಹೇಳಿದನು. “Sorry dude, please complete my all duties regarding my father”. ವಿಪರ್ಯಾಸವೆಂದರೆ ತನ್ನ ತಂದೆಯ ಮುಖವನ್ನು ಸಹ ನೋಡಲಿಕ್ಕಾಗದ ಆತ ತನ್ನ ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡನು ಹೀಗೆ. “RIP, miss u dad..!”

ಆಧುನಿಕ ದಿನಗಳಲ್ಲಿ ಜನರ ಕಣ್ಣುಗಳು ಅವರವರ ಕನ್ನಡಕಗಳಿಂದ ವರ್ಣಮಯವಾಗಿ ಪ್ರಜ್ವಲಿಸುತ್ತಿವೆ. ಏಕೆಂದರೆ ಹೊರಗಿನ ಜಗತ್ತು, ಅವರ ಕನ್ನಡಕಗಳಿಂದ ಬದಲಾಗುತ್ತಿರುವ ಅವರ ವೀಕ್ಷಣೆ, ಎಲ್ಲವೂ ವಿಭಿನ್ನ.

ನಾನು ಗಮನಿಸಿರುವ ಒಂದು ವಿಷಯವೇನೆಂದರೆ ಪೋಷಕರು ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಸ್ಫೂರ್ತಿ ತುಂಬುತ್ತಾರೆ. ಹೇಗೆಂದರೆ, “ಮಗೂ ನಿನ್ನಿಂದ ಸಾಧ್ಯ” (you can do it)  ಇದು ತಪ್ಪು ನಡವಳಿಕೆ. ಏಕೆಂದರೆ ಈ ಒಂದು ಮಾತು ಅನೇಕ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಈಗಷ್ಟೇ ಆಗ ಜನಿಸಿದ ಮಗುವಿನ ಕಿವಿಯಲ್ಲಿ ಅಪ್ಪ, ಅಮ್ಮ ಎಂದು ಹೇಳುವ ಬದಲು  Doctor, Engineer  ಎಂದು ಹೇಳುವ ದಾರಿದ್ರ್ಯ ಬಂದೊದಗಿದೆ. ಪೋಷಕರ ಒತ್ತಡದ ವರ್ತನೆ, ಸಂಬಂಧಿಕರ ಅನಗತ್ಯ ಸಂಭಾಷಣೆ, ಹೊರಗಿನ ತಂತ್ರಜ್ಞಾನ ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಂದು ನಿದರ್ಶನ ಎಂದರೆ ಇಬ್ಬರು ಅಕ್ಕಪಕ್ಕದ ಮನೆಯ ಹೆಂಗಳೆಯರು ತನ್ನ ಇಬ್ಬರು ಮಕ್ಕಳೊಂದಿಗೆ ಶಾಲಾ ವಾಹನಕ್ಕಾಗಿ ಕಾದಿದ್ದರು. ಆಗ ಆಕಸ್ಮಿಕವಾಗಿ ಒಬ್ಬ ಭಿಕ್ಷುಕನು ಭಿಕ್ಷೆಗಾಗಿ ಹಣವನ್ನು ಬೇಡಿ ಹೊರಟ. ಆಗ ಒಬ್ಬ ತಾಯಿಯು ತನ್ನ ಮಗುವಿಗೆ, “ಮಗೂ ನೀನು ವಿದ್ಯಾಭ್ಯಾಸ ಚೆನ್ನಾಗಿ ಮಾಡದಿದ್ದರೆ ಈ ರೀತಿ ಆಗುತ್ತೀಯಾ ಎಂದು ಹೇಳಿದಳು. ಇದನ್ನು ಕೇಳಿದ ಮತ್ತೊಬ್ಬ ತಾಯಿಯು ತನ್ನ ಮಗುವಿಗೆ, “ಪುಟ್ಟಾ, ನೀನು ವಿದ್ಯಾಭ್ಯಾಸ ಚೆನ್ನಾಗಿ ಮಾಡಿದರೆ ಇಂತಹ ಅನೇಕ ಭಿಕ್ಷುಕರಿಗೆ ಆಸರೆಯಾಗಬಹುದು.” ಈ ರೀತಿಯ ಬದಲಾವಣೆ ನಿಜವಾಗಲೂ ಬೇಕಾಗಿದೆ. ಆದರೆ ಇಂತಹ ಆಲೋಚನೆಯುಳ್ಳ ತಾಯಂದಿರು ವಿರಳ.

ಪೋಷಕರು ತಮ್ಮ ಐಷಾರಾಮಿ ಜೀವನದ ತುಣುಕನ್ನು ತಮ್ಮ ಮಕ್ಕಳಿಗೆ ಕೊಡುತ್ತಾರೆ. ಆದರೆ ಈ ಮಕ್ಕಳನ್ನು ನೋಡಿದ ಇನ್ನೊಂದು ಮಗು ತಾನೂ ಅವರಂತೆಯೇ ಐಷಾರಾಮವಾಗಿ ಬದುಕಬೇಕೆಂದು ದುಡ್ಡಿನ ಹಿಂದೆ ಓಡಲು ಶುರುಮಾಡುತ್ತಾನೆ. “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತು ಸುಳ್ಳೋ, ನಿಜವೋ ಗೊತ್ತಿಲ್ಲ. ಆದರೆ ಪ್ರತಿ ಮಗುವೂ ತನ್ನ ಸ್ವಂತ ಸುಖದೆಡೆಗೆ ಓಡುತ್ತಿರುವುದಂತೂ ನಿಜ.

ಪೋಷಕರ ಹಾಗೂ ಮಕ್ಕಳ ಸಂಬಂಧ ಸೂರ್ಯ ಹಾಗೂ ಚಂದ್ರನಂತಿರಬೇಕು. ಏಕೆಂದರೆ ಸೂರ್ಯ ಮತ್ತು ಚಂದ್ರರ ನಡುವಿನ ಪ್ರೀತಿಯ ಕಾಂತಿ ಹಾಗೂ ಮಮತೆ ಯಾರಿಗೂ ಕಾಣುವುದಿಲ್ಲ. ಆದರೆ ಸೂರ್ಯನ ಕಿರಣ ಚಂದ್ರನನ್ನು ಸ್ಪರ್ಶಿಸುತ್ತಲೇ ಚಂದ್ರನು ಪ್ರಕಾಶಿಸಲು ಶುರುಮಾಡುತ್ತಾನೆ. ಹೀಗೆಯೇ ಪೋಷಕರ ವಿಚಾರ ನಡವಳಿಕೆಗಳು ಸೂರ್ಯನ ಕಿರಣದಂತಿರಬೇಕು. ಆಗ ಮಾತ್ರ ಸಾಧನೆ ಎಂಬ ಭೂಮಿಗೆ ಚಂದ್ರನ ಪ್ರಭೆ ಸಾಧ್ಯ.
ಬದಲಾಗಬೇಕಾಗಿರುವುದು ಅವರು ಇವರಲ್ಲ ನಾನು ಎಂದುಕೊಂಡು ತಮ್ಮ ಆಸೆ ಬಯಕೆಗಳನ್ನು ಮಕ್ಕಳ ಮೇಲೆ ತೋರ್ಪಡಿಸಿಕೊಳ್ಳದೇ ಸ್ವತಂತ್ರವಾಗಿ ಮಕ್ಕಳನ್ನು ಪಕ್ಷಿಯಂತೆ ಹಾರಲು ಬಿಡಿ ಅನ್ನುವುದೇ ನನ್ನ ಅಭಿಪ್ರಾಯ.

Today’s children are the brightest future of a country.

ಮಗುವಾಗು ಮನವೇ………!

ರಕ್ಷಿತ್ ಎಚ್. ಆರ್

ಪ್ರಥಮ ಬಿ. ಎ , ವಿದ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ