ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ ಶುಭಾಶಯಗಳು (Happy Teachers Day)

“ಗುರುಬ್ರಹ್ಮ, ಗುರುವಿಷ್ಣು ಗುರುದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ”

ಅಂದರೆ, ಗುರುವು ಬ್ರಹ್ಮ, ವಿಷ್ಣುಮತ್ತು ಮಹೇಶ್ವರರ ಸ್ವರೂಪಿಯಾಗಿದ್ದು, ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು, ಎನ್ನುತ್ತಾರೆ ಶಂಕರಾಚಾರ್ಯರು.

ಹಾಗೆಯೇ ಪುರಂದರದಾಸರು : “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ತಿಂಗಳು ಬಂತೆಂದರೆ ಮೊದಲು ನೆನಪಾಗುವುದು ಶಿಕ್ಷಕರ ದಿನಾಚರಣೆ, ಹೌದು ಸೆಪ್ಟೆಂಬರ್‌ 5 ಶಿಕ್ಷಕರ ದಿನಾಚರಣೆ ಹಾಗೂ ಡಾ.|| ಸರ್ವಪಲ್ಲಿ ರಾಧಕೃಷ್ಣನ್‌ ರವರ ಹುಟ್ಟುಹಬ್ಬವೂ ಕೂಡ. ಪ್ರತಿ ಶಾಲಾ ಕಾಲೇಜುಗಳಿಗೆ ಮಾತ್ರ ಸಿಮೀತವಾಗದೆ, ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ತಮಗೆ ತಿಳಿದಿರುವ ವಿಷಯದ ಜೊತೆಗೆ, ತಮಗೆ ತಿಳಿದಿರದ ವಿಷಯಗಳನ್ನು ತಿಳಿದು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕರುಗಳಿಗಾಗಿಯೇ ಇರುವ ದಿನ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆ ದಿನ ತಮ್ಮ ಶಿಕ್ಷಕರಿಗಾಗಿ ಹಬ್ಬದ ವತಾವರಣ ನಿರ್ಮಿಸುತ್ತಾರೆ.

ವಿವಿದ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಆ ದಿನವನ್ನು ಅರ್ಥ ಪೂರ್ಣಗೊಳಿಸುತ್ತಾರೆ. ಅಲ್ಲದೆ ತಮ್ಮ ವಿದ್ಯಾರ್ಥಿ ಜೀವನದ  ಶಿಕ್ಷಕರನ್ನು / ನೆಚ್ಚಿನ ಗುರುಗಳನ್ನು ನೆನಪಿಸಿಕೊಂಡು ಕೃತಙ್ಞಾತೆಗಳನ್ನು ತಿಳಿಸುತ್ತ ಅವರೊಂದಿಗಿನ ಆವಿನಾಬಾವ ನೆನಪುಗಳನ್ನು ಮೆಲುಕು ಹಾಕುವುದು ಈ ದಿನದ ವಿಶೇಷ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ತೆಗಿಸಿದ ಭಾವಚಿತ್ರಗಳೊಂದಿಗೆ ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ಸಂಬ್ರಮಿಸುತ್ತಾರೆ.

ಅರಿವಿಗೂ ಸಿಗದ ಜ್ಞಾನದ ಮೂರ್ತಿ ಶಿಕ್ಷಕ.

ಅರಿಯದೆ ಆದ ತಪ್ಪನ್ನು ಕ್ಷಮಿಸುವವ ಶಿಕ್ಷಕ.

ಅರಿವೂ ಎಂಬ ಜ್ಞಾನವನ್ನು ಬಿತ್ತಿ,  ಪೋಷಿಸುವ  ಮಾರ್ಗದರ್ಶಕ.

ಅರಿಯದೆ ಬರುವ ಅಹಂ ಎಂಬ ನೌಕೆಯನ್ನು ಕಿತ್ತೊಗೆಸಿ.

ಪ್ರತ್ಯಕ್ಷ ಮೂರ್ತಿ ಆಗುವ ಸಹಾನು ದ್ಯೋತಕ.

ಅಮ್ಮ ಅಪ್ಪ ಎಂಬ ಎರಡಕ್ಷರದ ನಡುವೆ.

ಎಣಿಕೆಗೂ ಸಿಗದಷ್ಟು ಬಂದು ಹೋಗುವ ಗುರುವೆಂಬ ನಾವಿಕ.

ಆಕಾಶದ ಅಂಚನ್ನು ತಟ್ಟುವಂತೆ  ಪ್ರೋತ್ಸಾಹ ನೀಡುವ ಉತ್ಸಾಹದ ಬಿಂಬಕ.

ಅಮ್ಮಂನಂತೆ ಆಲಂಗಿಸಿ, ಅಪ್ಪನಂತೆ ಆಶೀರ್ವದಿಸಿ ಆತ್ಮೀಯ ಮಿತ್ರರಾಗುವ

ಅಪಾರ ಜೀವೊನ್ಮದದ ಹಿಂಚಾಲಕ.

ಎಂದಿಗೂ ನಮ್ಮೊಂದಿಗಿರುವ ಗುರುವೇ.

ನಿಮಗಿದೋ ವರ್ಷಾಕೊಮ್ಮೆ ಆಚರಿಸುವ

ಶಿಕ್ಷಕರ ದಿನದ ಶುಭಾಶಯಗಳು.

💐||ಗುರುಭ್ಯೋ ನಮಃ||💐

ಭಾರ್ಗವಿ. ಜಿ.ಆರ್

ಪ್ರಥಮ ಬಿ. ಎ. ವಿದ್ಯಾರ್ಥಿನಿ

ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ