ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

Image Credit: Anikethana S

ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

ಪ್ರೇರಣೆಯ ಹಾದಿಯಲಿ ಅಭಿಲಾಷೆಯ ಅಮಲಿನಲಿ,

ಅಮೋಘ ಹಾಗೂ ನವ್ಯವಾದ ಸಾಧನೆಯ ಸಾಧಿಸಲು

ವಿನಯವನ್ನು ಮಾಲೆಯನ್ನಾಗಿಸಿಕೊಂಡೆ.

ಅನಿಕೇತನನಾಗಲು ಶ್ರೇಯೆಯ ಶೃತಿಯನ್ನು ಹಿಡಿದು

ನಿತ್ಯವೂ ರಜಿಯನ್ಹಾಕದೆ ‌ಆಲಯವನ್ಹೊಕ್ಕು

ಗಾನದೇವಿ ಸರಸ್ವತಿಗೆ ಪ್ರಥಮವಾಗಿ ಕಾವ್ಯಪಲ್ಲವಿಯ

ಸಂಗೀತಸುಧೆಯನರ್ಪಿಸಿ ಚೈತನ್ಯಗೊಳಿಸಿ

ವಿದ್ಯುತ್ಸಂಚಯನಗೊಳಿಸುವ ಮದೀರ್ಮೋಹಗಳನ್ನು ಮಸ್ತಿಷ್ಕದೊಳಗೆ ನಂದಿಸಿ

ಆಕಾಶದೊರೆಯ ಶೋಭೆಯನ್ನು

ಮನೆಯೊಳಗಿನಭೂಮಿಕೆಗಾಹ್ವಾನಮಾಡಿ ಸುವರ್ಣನಿಧಿಯನ್ನಾಗಿಸಿ

ದೀಪಿಕೆಯ ದೀಪ್ತಿಯನು ಪ್ರಜ್ವಲಗೊಳಿಸಿ

ರಂಗೋಲಿಯ ಮಂಜುಸುರೇಖೆಗಳನ್ನಿಟ್ಟು ಮನುವಂತರದ ಯುಗದಲಿ

ಚಂದನ-ಸಿಂಧೂರವನಿಟ್ಟು ಗಾಯತ್ರಿಯನು ಮಂತ್ರದಿಂದ ರಮಿಸಿ

ನಂದಿನಿಯ ಪವಿತ್ರತೆಯನ್ನು ಜಾಹ್ನವಿಯೊಂದಿಗೆ ವೇಣಿಸಂಗಮಗೊಳಿಸಿ

ಶಶಿಕಲಾಧರನಾದ ಮಲ್ಲಿಕಾರ್ಜುನ ಲಿಂಗಾಭಿಷೇಕವನು ಮಾಡಿ

ನಯನಗಳನ್ಮುಚ್ಚಿ ರಾಜೇಶ್ವರಿಯ ಅವಧಾನಿಸುತ

ಮೃಣಾಲಿನಿಯನ್ನು ತೆರೆದು ತೇಜಸ್ವಿಯಂತೆ ಮೈಯೊಲಿಯುತ

ಎದ್ದು  ಸ್ವಾತಿ ಮಳೆಯ ಹನಿಗಳು ಜೀವಿತವಿರುವ

ಮಧುಮುಟ್ಟದ ದಿವ್ಯ ಬಬ್ಬಲಿತ ಪುಷ್ಪಗಳನ್ನು

ಜಾನುವಾರುಗಳಿಗಾಹಾರವನಾಗಿ ಅರ್ಪಿಸಿ ಪ್ರಾಣವನ್ನು ಸಡಿಲಗೊಳಿಸಿಕೊಂಡು

ಪೈಗಳ ಕಾಲೇಜಿನಲ್ಲಿ ಇಂತಹ ಅಮೂಲ್ಯ ಸ್ನೇಹಿತರ ನಡುವೆ

ನಾನು ಸದಾ ರಕ್ಷಿತನಾಗಿರಲಿ ಎಂದು ಬೇಡಿಕೊಳ್ಳುವೆ.

 

ರಕ್ಷಿತ್.  ಹೆಚ್. ಆರ್

ದ್ವೀತಿಯ ಬಿ ಎ ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ಅವನ ತರಗತಿಯ ಸುಮಾರು 60 ಕ್ಕೂ ಹೆಚ್ಚು ಬಿ.ಎ ಮತ್ತು ಬಿ.ಎಸ್.‌ಡಬ್ಲ್ಯೂ. ವಿಧ್ಯಾರ್ಥಿಗಳ ಹೆಸರಿನಲ್ಲೇ ಈ ಪದ್ಯ ರಚಿಸಲಾಗಿದೆ. 

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

ನನ್ನ ಕಾಲೇಜು ನನ್ನ ಹೆಮ್ಮೆ

ನನ್ನ ಕಾಲೇಜು ನನ್ನ ಹೆಮ್ಮೆ

ಈ ಕಥೆ ಶುರುವಾಗುವುದು ಒಂದು ಆನ್ಲೈನ್ ವೇಬಿನರ್ ನಲ್ಲಿ, ಒಬ್ಬ ವಿದ್ಯಾರ್ಥಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ, ಮಾನಸ ಸಂಸ್ಥೆಯ ಯಾವುದೇ ವಿಭಾಗದಲ್ಲಿ ಸಂಸ್ಥೆಯ ನಿರ್ದೇಶಕರಿಂದ ಹಿಡಿದು ಸಂಸ್ಥೆಯಲ್ಲಿ ಕಸ ಗುಡಿಸುವವರವರೆಗೂ ಮಹಿಳೆಯರ ಪ್ರಮಾಣ ಹೆಚ್ಚಿದೆ, ಕಾಲೇಜಿನ ಆಡಿಟೋರಿಯಂನಲ್ಲಿ ಯಾವುದಾದರೂ ಕಾರ್ಯಕ್ರಮ ಆಯೋಜಿಸಿದರೆ ಒಂದಷ್ಟು ಪ್ರಮಾಣದಲ್ಲಿ ಗಂಡು ಮಕ್ಕಳು ಇದ್ದರೆ ಆಡಿಟೋರಿಯಂನಾ ಮೊದಲಿನಿಂದ ಕೊನೆಯವರೆಗೂ ಹೆಣ್ಣುಮಕ್ಕಳೇ ಕುಳಿತಿರುತ್ತಾರೆ,     ಹೀಗೆ ಒಮ್ಮೆ ನನ್ನ ಬೇರೆ ಕಾಲೇಜಿನ ಸ್ನೇಹಿತ ಕೇಳಿದ “ಕೋ-ಎಜುಕೇಶನ್ ಅಂತ ಬಂದಾಗ ಯಾವುದೇ ಶಾಲಾ-ಕಾಲೇಜುಗಳಲ್ಲಿ ಹುಡುಗಿಯರಿಗಿಂತ ಹುಡುಗರ ಪ್ರಮಾಣ ಹೆಚ್ಚಿರುತ್ತದೆ, ಆದರೆ ನಿಮ್ಮ ಕಾಲೇಜಿನಲ್ಲಿ  ಯಾಕೆ ಹುಡುಗಿಯರೇ ಜಾಸ್ತಿ ಇದ್ದಾರೆ?” ಎಂದು…..

ಸ್ವಲ್ಪ ಹೊತ್ತಿನ ನಂತರ ಅವನೇ ಉತ್ತರ ಹೇಳಿದ “ಭವಿಷ್ಯಃ ಎಷ್ಟೋ ಜನ ಹೆಣ್ಣುಮಕ್ಕಳ ತಂದೆ-ತಾಯಿಯರಿಗೆ ಅನ್ನಿಸಿರಬಹುದು ನನ್ನ ಮಗಳನ್ನು ಈ ಕಾಲೇಜಿನಲ್ಲಿ ಸೇರಿಸಿದರೆ ಹೆಚ್ಚಿನ ಭದ್ರತೆ, ಸುರಕ್ಷತೆ, ಸ್ವಾಯತ್ತತೆ , ನನ್ನ ಮಗಳಿಗೆ ಸಿಗಬಹುದು ಆದ್ದರಿಂದ ಈ ಕಾಲೇಜಿಗೆ ಸೇರಿಸಲೇಬೇಕು ಎಂದು, ಅದಕ್ಕೆ ನಿಮ್ಮ ಕಾಲೇಜಿನಲ್ಲಿ ಹುಡುಗಿಯರು ಜಾಸ್ತಿ” ಎಂದು ಹೇಳಿದ.

ಬೇರೆ ಕಾಲೇಜಿನ ವಿದ್ಯಾರ್ಥಿಯೊಬ್ಬ ನಮ್ಮ ಕಾಲೇಜಿನ ಬಗ್ಗೆ ಇಷ್ಟೆಲ್ಲಾ ಅರ್ಥ ಮಾಡಿಕೊಂಡಿರುವುದನ್ನು ನೋಡಿ ಖುಷಿಯಾಯಿತು ಮತ್ತು ನಾವು ಎಂತಹ ಒಳ್ಳೆಯ ಕಾಲೇಜಿನಲ್ಲಿ ಓದುತ್ತಿದ್ದೇವೆ ಎಂದು ಒಮ್ಮೆ ನೆನಪಿಗೆ ಬಂದು ಹೆಮ್ಮೆಯಾಯಿತು.

ಇದಕ್ಕಿಂತ ಒಳ್ಳೆಯ ಮಹಿಳಾ ಅಭಿವೃದ್ಧಿ ಕಾರ್ಯ ಬೇಕಾ? ಹೆಣ್ಣುಮಕ್ಕಳಿಗೆ ಹೆಚ್ಚೆಂದರೆ 2nd PUC ಓದಿಸಿ ನಂತರ ಮದುವೆ ಮಾಡಿಸಿ ಕಳುಹಿಸಿದರೆ ಆಗುತ್ತಾ? ಈ ಕಾಲೇಜಿನಲ್ಲಿ BA, BSW, BSC, MScಯಲ್ಲಿ ಸಹಿತ ಹೆಚ್ಚಿನ ಹೆಣ್ಣುಮಕ್ಕಳೇ ಇದ್ದಾರೆ, ಮಾನಸ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿ ವರ್ಗ ಹೆಚ್ಚಿನದಾಗಿ ಮಹಿಳಾ ಸಿಬ್ಬಂದಿ ವರ್ಗವೇ ಆಗಿದೆ, ಈ ಕಾಲೇಜಿನ “ಮಹಿಳಾ ವಿದ್ಯಾರ್ಥಿನಿಯರ ಸೈನ್ಯವೇ” ಒಮ್ಮೆ ಕೇಳಿ ಈ ಕಾಲೇಜಿನ ಮುಖಾಂತರ ನೀವೇ ಸಮಾಜಕ್ಕೆ ತೋರಿಸುತ್ತಿದ್ದೀರಿ ಮಹಿಳೆಯರಿಗೆ ಕಟ್ಟುಪಾಡುಗಳನ್ನು ಹಾಕದೆ ಅವರಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಅವರು ರಾಷ್ಟ್ರವನ್ನೇ ಅಭಿವೃದ್ಧಿ ಮಾಡುತ್ತಾರೆ ಎಂದು…….. ವಿವೇಕಾನಂದರು ಸಹ ಇದನ್ನೇ ಹೇಳಿದ್ದು “ಮಹಿಳೆಯರನ್ನು ಉದ್ದಾರ ಮಾಡಲು ನೀನ್ಯಾರು? ಮಹಿಳೆಯರಿಗೆ ಯಾವುದೇ ಕಟ್ಟುಪಾಡನ್ನು ಹಾಕದೆ ಸುಮ್ಮನೆ ಬಿಟ್ಟರೆ ಅವರು ತಾನೇತಾನಾಗಿ ಅಭಿವೃದ್ಧಿಹೊಂದಿ ಮುಂದೆ ರಾಷ್ಟ್ರವನ್ನು ಸಹ ಮುನ್ನಡೆಸುತ್ತಾರೆ” ಎಂದು, ಈ ನುಡಿಗಳನ್ನು ನಾವು ಕೇಳಿದ್ದೆವು, ಈಗ ನೋಡುತ್ತಿದ್ದೇವೆ……..

ಕೊನೆಯದಾಗಿ ಒಂದು ಮಾತು ಭೂಮಿತಾಯಿ ಹೆಣ್ಣು, ಭಾರತಮಾತೆ ಹೆಣ್ಣು, ಕರ್ನಾಟಕ ಮಾತೆ ಹೆಣ್ಣು, ನಮ್ಮ ತಾಯಿ, ಅಕ್ಕ, ತಂಗಿ, ಗೆಳತಿ, ಹೆಂಡತಿ, ಮಗಳು, ಎಲ್ಲರೂ ಹೆಣ್ಣೆ, ಹೆಣ್ಣಿಲ್ಲದೆ ಗಂಡಿಲ್ಲ, ಗಂಡಿಲ್ಲದೇ ಹೆಣ್ಣಿಲ್ಲ ಇದು ಪ್ರಕೃತಿ ನಿಯಮ. ಮಹಿಳಾ ದಿನಾಚರಣೆಯ ದಿನ ಒಂದು ದಿನದ ಮಟ್ಟಿಗೆ ಮಹಿಳೆಯರೆಲ್ಲ ಶುಭಾಶಯವನ್ನು ಹೇಳಿಕೊಂಡರೆ ಅದು ಮಹಿಳಾ ದಿನಾಚರಣೆಯಲ್ಲಾ…….

ಇಡೀ ವರ್ಷಪೂರ್ತಿ ಪುರುಷರೆಲ್ಲ ಮಹಿಳೆಯರನ್ನು ಗೌರವದಿಂದ ಕಂಡರೆ ಅದು ನಿಜವಾದ ಮಹಿಳಾ ದಿನಾಚರಣೆ, ಹೆಣ್ಣು ಮನಸ್ಸು ಮಾಡಿದರೆ ದುರ್ಗೆಯಂತೆ, ಕಾಳಿಯಂತೆ ಮೈ ಕೊಡವಿ ನಿಂತು ತನ್ನನ್ನು ರಕ್ಷಿಸಿಕೊಳ್ಳುತ್ತಾ ಇತರರನ್ನು ರಕ್ಷಿಸುತ್ತಾಳೆ, ಹೆಣ್ಣನ್ನು ರಕ್ಷಿಸುವುದಲ್ಲಾ ಗೌರವಿಸೋಣ…… ಅವಳಿಗೆ ತನ್ನನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸುವುದು ಗೊತ್ತಿದೆ……..

ಮಹಿಳೆಯರ ಅಭಿವೃದ್ಧಿಯು ಸಮಾಜಕ್ಕೆ ಕಾಣುವಂತೆ ಮಾಡುತ್ತಿರುವ ಮಾನಸ ಸಂಸ್ಥೆಯ ನಿರ್ದೇಶಕರಿಗೂ, ನಮ್ಮ ಕಾಲೇಜಿನ ಪ್ರಾಂಶುಪಾಲರಿಗೂ, ಕಾಲೇಜಿನ ಶಿಕ್ಷಕ ವೃಂದಕ್ಕೂ ಮತ್ತು ನಮ್ಮ ಕಾಲೇಜಿನ ಮಹಿಳಾ ಸೈನ್ಯಕ್ಕೂ, ಪುರುಷ ವಿದ್ಯಾರ್ಥಿಗಳಿಗೂ ಎಲ್ಲರಿಗೂ ಶತಶತ ನಮನಗಳು………


ನಾಗೇಂದ್ರ,

ಪ್ರಥಮ ವರ್ಷದ ಸಮಾಜಕಾರ್ಯ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ,