ಆ ದಿನ ಸಂಜೆ ಹೊಸನಗರದಿಂದ ಶಿವಮೊಗ್ಗಕ್ಕೆ ಬಂದು ಕಾಲಿಟ್ಟ ಆ ದಿನ ಕಳೆದು ಬಹಳ ಕಾಲವಾಯಿತು ಎಂದು ಅನಿಸುತ್ತಿಲ್ಲ..
ನೋಡು ನೋಡುತ್ತಲೇ ಎರಡು ವರ್ಷ ಅಲ್ಲ ಎರಡುವರೆ ವರ್ಷಗಳು ಕಳೆದು ಹೋಯಿತು.. ಯಾರೂ ಪರಿಚಯ ಇರದ ತರಗತಿ, ಬೆರಳೆಣಿಕೆ ದಿನಗಳಲ್ಲಿ ಪರಿಚಯವಾಗಿ ಕಳೆದು ಹೋದ ಆ ದಿನಗಳನ್ನು ನೆನೆಯುವುದು ಅನಿವಾರ್ಯ.
ಕ್ಲಾಸ್ ಇಲ್ಲದೆ ಇದ್ದಾಗ ಸ್ನೇಹಿತರೊಂದಿಗೆ ಹರಟೆ ಹೊಡೆದ ಆ ಕ್ಷಣಗಳು, ಮಾಡಿದ ಮೋಜು ಮಸ್ತಿ, ನಮಗೆ ಫ್ರೆಷರ್ಸ್ ಪಾರ್ಟಿ ಕೊಟ್ಟ ಆ ಸೀನಿಯರ್ಸ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಿದ ಆ ಕ್ಷಣಗಳು, ಕನ್ನಡ ತರಗತಿಯಲ್ಲಿ ಮಾಡಿದ ತರ್ಲೆಗಳು, ಇಂಗ್ಲಿಷ್ ತರಗತಿಯಲ್ಲಿ ಮಾಡಿದ ಕೀಟಲೆಗಳು,
ಆಪ್ಷನಲ್ ಇಂಗ್ಲಿಷ್ ತರಗತಿಯಲ್ಲಿ ನಿದ್ರೆ 😴 ಹೋದ ಆ ಕ್ಷಣಗಳು, ಸೈಕಾಲಜಿ ತರಗತಿಯಲ್ಲಿ ತಮಾಷೆ ಮಾಡಲು ಹೋಗಿ ಅಮಾವಾಸ್ಯೆಯಾದ ಆ ದಿನಗಳು😂🙌, ಆಕ್ಟಿವಿಟಿ ಗಾಗಿ ಕೂರುತ್ತಿದ್ದ ಜರ್ನಲಿಸಂ ಕ್ಲಾಸ್ ಗಳು,🥳, ಅಟೆಂಡೆನ್ಸ್ ಬೇಕಲ್ಲ ಎಂದು ಕೂರುತಿದ್ದ ಐಸಿ ಮತ್ತು ಇವಿಎಸ್ ತರಗತಿಗಳು😁.
ಬೇಡ ಬೇಡವೆಂದರೂ ಬರುತ್ತಿದ್ದ ಎರಡು ಇಂಟರ್ನಲ್ಸ್ ಗಳು🥺🤦🏻♀️, ನಾನ್ ಏನ್ ಕಮ್ಮಿ ಇಲ್ಲ ಅಂತ ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾಕ್ ಪ್ರಾಕ್ಟಿಕಲ್ಸ್ ಗಳು 🤦🏻♀️ಕ್ಲಾಸ್ ಟೆಸ್ಟ್ ಗಳು, ಇವೆಲ್ಲವೂ ಕೂಡ ಮೊನ್ನೆ ಮೊನ್ನೆ ಅಷ್ಟೇ ನಡೆದಂತೆ ಅನಿಸುತ್ತಿದೆ..
ಕ್ಲಾಸ್ ಮುಗಿದ ಕೂಡಲೇ ಪಕ್ಕದಲ್ಲಿರುವ ಟೀ ಅಂಗಡಿಗೆ ಹೋಗಿ ಕುಡಿಯುತ್ತಿದ್ದ ಬಿಸಿ ಬಿಸಿ ಟೀ ☕ ಗಳು ಮತ್ತು 12 ರೂಪಾಯಿಯ ಪೇಪರ್ ಬೋಟ್ಗಳು 🧃, ಹೊರಗಡೆ ಊಟಕ್ಕೆ ಕಾಸಿಲ್ಲ💰 ಎಂದಾಗ ಕಾಲೇಜ್ ಕ್ಯಾಂಟೀನ್ ನಲ್ಲೇ ಅನ್ನ ಮತ್ತು ಸೊಪ್ಪಿನ ಹುಳಿ 🍚 ತಿನ್ನುತ್ತಿದ್ದ ಆ ದಿನಗಳು, ಕೆಲವರಿಗಂತು ಉಪ್ಪಿನಕಾಯಿಯೇ ಅನ್ನ 😂 ಹೋಗಿಬಂದು ಕುಡಿಯುತ್ತಿದ್ದ ಆ ಮಜ್ಜಿಗೆ ಮತ್ತು ತಿನ್ನುತ್ತಿದ್ದ 🍋 ನಿಂಬೆಕಾಯಿ ಉಪ್ಪಿನಕಾಯಿ.
ಕಾಲೇಜ್ ಕ್ಯಾಂಟೀನ್ ನಲ್ಲಿ ತಿಂದು ತಿಂದು ಬೇಸರವಾದಾಗ, ಸಾಲ ಮಾಡಿ ಹೋಗುತ್ತಿದ್ದ ಆ ತಿನಿಸು ಅಂಗಳ (ಫುಡ್ ಕೋರ್ಟ್) ದಲ್ಲಿ ತಿನ್ನುತ್ತಿದ್ದ ಆ ಪಲಾವ್, ಗೋಬಿ, ಮೊಸರನ್ನ, ದಿನ ಕಳೆದಂತೆ ಬದಲಾದ ಆ ಪಯಣದ ದಾರಿ ವೆಜ್ ಫುಡ್ ಕೋರ್ಟ್ ನಿಂದ ನಾನ್ ವೆಜ್ ಫುಡ್ ಕೋರ್ಟ್ ಕಡೆಗೆ.
ತರಗತಿ ಇದ್ದರೂ ಬಂಕ್ ಮಾಡಿ ಲೈಬ್ರರಿಯಲ್ಲಿ ಕೂತು ಕಂಪ್ಲೀಟ್ ಮಾಡಿದ ಅಸೈನ್ಮೆಂಟ್ ಮತ್ತು ರೆಕಾರ್ಡ ಗಳು ಗಳು, ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ ಆ ಪಿಪಿಟಿ ಮತ್ತು ಸೆಮಿನಾರ್ ಗಳು, ಮಧ್ಯಾಹ್ನ ಕ್ಲಾಸ್ ಇಲ್ಲದೆ ಇದ್ದಾಗ ಮಾಡಿದ ಆ ಗಲಾಟೆಗಳು, ಅದಕ್ಕೆ ಪ್ರತಿಫಲವಾಗಿ ಸರಾಸರಿಯಾಗಿ ಪ್ರತಿಯೊಬ್ಬ ಶಿಕ್ಷಕರಿಂದ ಉಗಿಸಿಕೊಂಡ ಆ ಮಧುರವಾದ ಕ್ಷಣಗಳು. 😁⭐
ಕಡೆ ಕಡೆಗೆ ಪರಿಚಯ ಆದ ಜೂನಿಯರ್ಸ್ ಗಳು🦧 ಸೀನಿಯರ್ಸ್ ಅಂತ ಬಹಳ ಮರ್ಯಾದೆ ಮರ್ಯಾದೆ ನೀಡುತ್ತಾ ನಮಗೆ ಹೆದರದೆ ಸಹೋದರ ಸಹೋದರಿಯರಂತೆ ಕೀಟಲೆ ಮಾಡಿ, ಕಾಳಜಿ ತೋರಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕಲಿಯುತ್ತಿರುವ ಗೆಳೆಯರು.
ಇಂಟರ್ನಲ್ ಇದ್ದಾಗ ಮಾತ್ರ ಯೂಸ್ ಮಾಡಿಕೊಳ್ಳುತ್ತಿದ್ದ ಲೈಬ್ರರಿ ಕಾರ್ಡುಗಳು , ಲೈಬ್ರರಿಗೆ ಓದಲು 📖 ಎಂದು ಹೋಗಿ ಅಲ್ಲೇ ಮಲಗಿ ಬಿಡುತ್ತಿದ್ದ ಸಾಧಕರದ ನನ್ನ ಮಿತ್ರರು, ಸದಾಕಾಲ ಓದುತ್ತಲೇ ಇದ್ದು ಟಾಪರ್ ಟಾಪರ್ ಎಂದು ಕರೆಸಿ ಕೊಳ್ಳುತ್ತಿದ್ದಂತ ಮಹಾನ್ ಮೇಧಾವಿಗಳು, ಏನು ಓದದೆ ಪರೀಕ್ಷೆಯಲ್ಲಿ ಓದಿದವರಿಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದ ಬುದ್ಧಿವಂತರು, ಏನನ್ನು ಓದಿಯೇ ಇಲ್ಲ ಓದಿಯೇ ಇಲ್ಲ ಎಂದು ಕಾಗೆ ಹಾರಿಸಿ ಪ್ರತಿ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುತ್ತಿದ್ದ ಆ ಮಿತ್ರದ್ರೋಹಿಗಳು.
ಸದಾಕಾಲ ಹೊಗಳಿಸಿಕೊಳ್ಳುವವರ ಮಧ್ಯೆ ಇಲ್ಲದ ಕೀಟಲೆಗಳನ್ನು ಮಾಡಿ ಬೈಸಿಕೊಳ್ಳುತ್ತಿದ್ದ ವೀರರು, ಪ್ರಾರಂಭದಲ್ಲಿ ಉಂಟಾದ ಅದೆಷ್ಟೋ ಗ್ಯಾಂಗ್ಗಳು, ಕಾಲಾ ನಂತರ ಮುರಿದು ಬಿದ್ದ ಅದೇ ಗ್ಯಾಂಗಳು, ಉಂಟಾದ ಅದೆಷ್ಟೋ ಮನಸ್ತಾಪಗಳು , ಬಿಡು ಮಚ ಇದೆಲ್ಲ ಕಾಮನ್ ಅನ್ನುತ್ತಾ..
ಫ್ರೆಂಡ್ಶಿಪ್ ಅಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ,
ಕಂಪ್ರೋ ಮಾಡಿ ಮತ್ತರಿತುಕೊ ಒಗಟ್ಟಲಿ ಬಲವಿದೆ..
ಎಂದು ಕಿರಿಕ್ ಪಾರ್ಟಿ ಸಿನೆಮಾದ ಹಾಡನ್ನು ನೆನೆಸುತ್ತ ಕೊನೆಗೂ ಒಂದಾದ ಅದೆಷ್ಟೋ ಸ್ನೇಹ ಸಂಬಂಧಗಳು.
ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದ ಪ್ರತಿಭೆಗಳು⭐, ಪ್ರತಿಯೊಬ್ಬರೂ ಭಾಗವಹಿಸಲೇಬೇಕೆಂದು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದ ಕಟೀಲ್ ಅಶೋಕ್ ಪೈ ಕಾಲೇಜಿನ ಶಿಕ್ಷಕ ವೃಂದ, ಯಾವ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಹೊರಗಡೆ ಹೋಗದಂತೆ ಕಾವಲು ಕಾಯುತ್ತಿದ್ದ ಅಬ್ದುಲ್ ಅಣ್ಣ,
ಇದೇ ನಮ್ಮೆಲ್ಲರ ಕಾಲೇಜ್ ,
ಇಷ್ಟೇ ಅಲ್ಲ ಹೇಳಕ್ ಹೋದ್ರೆ ಬೇಜಾನ್ ಇದೆ ಆದ್ರೆ ಓದೊರಿಲ್ಲ.. Anyway ಇನ್ನೇನ್ ಕಾಲೇಜ್ ಮುಗೀತಾ ಬಂತು … ನಗ್ತಾ ಇರೋಣ ನಾಗ್ಸ್ತಾ ಇರೋಣ..
ಇಷ್ಟು ಹೇಳಕ್ಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್.
ಮಧುಶ್ರೀ,
ತೃತೀಯ ಬಿ. ಎ, ವಿದ್ಯಾರ್ಥಿನಿ