ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

Image Credit: Anikethana S

ಸ್ನೇಹಿತರ ನಡುವೆ ನಾನು ಸದಾ ರಕ್ಷಿತನಾಗಿರಲಿ

ಪ್ರೇರಣೆಯ ಹಾದಿಯಲಿ ಅಭಿಲಾಷೆಯ ಅಮಲಿನಲಿ,

ಅಮೋಘ ಹಾಗೂ ನವ್ಯವಾದ ಸಾಧನೆಯ ಸಾಧಿಸಲು

ವಿನಯವನ್ನು ಮಾಲೆಯನ್ನಾಗಿಸಿಕೊಂಡೆ.

ಅನಿಕೇತನನಾಗಲು ಶ್ರೇಯೆಯ ಶೃತಿಯನ್ನು ಹಿಡಿದು

ನಿತ್ಯವೂ ರಜಿಯನ್ಹಾಕದೆ ‌ಆಲಯವನ್ಹೊಕ್ಕು

ಗಾನದೇವಿ ಸರಸ್ವತಿಗೆ ಪ್ರಥಮವಾಗಿ ಕಾವ್ಯಪಲ್ಲವಿಯ

ಸಂಗೀತಸುಧೆಯನರ್ಪಿಸಿ ಚೈತನ್ಯಗೊಳಿಸಿ

ವಿದ್ಯುತ್ಸಂಚಯನಗೊಳಿಸುವ ಮದೀರ್ಮೋಹಗಳನ್ನು ಮಸ್ತಿಷ್ಕದೊಳಗೆ ನಂದಿಸಿ

ಆಕಾಶದೊರೆಯ ಶೋಭೆಯನ್ನು

ಮನೆಯೊಳಗಿನಭೂಮಿಕೆಗಾಹ್ವಾನಮಾಡಿ ಸುವರ್ಣನಿಧಿಯನ್ನಾಗಿಸಿ

ದೀಪಿಕೆಯ ದೀಪ್ತಿಯನು ಪ್ರಜ್ವಲಗೊಳಿಸಿ

ರಂಗೋಲಿಯ ಮಂಜುಸುರೇಖೆಗಳನ್ನಿಟ್ಟು ಮನುವಂತರದ ಯುಗದಲಿ

ಚಂದನ-ಸಿಂಧೂರವನಿಟ್ಟು ಗಾಯತ್ರಿಯನು ಮಂತ್ರದಿಂದ ರಮಿಸಿ

ನಂದಿನಿಯ ಪವಿತ್ರತೆಯನ್ನು ಜಾಹ್ನವಿಯೊಂದಿಗೆ ವೇಣಿಸಂಗಮಗೊಳಿಸಿ

ಶಶಿಕಲಾಧರನಾದ ಮಲ್ಲಿಕಾರ್ಜುನ ಲಿಂಗಾಭಿಷೇಕವನು ಮಾಡಿ

ನಯನಗಳನ್ಮುಚ್ಚಿ ರಾಜೇಶ್ವರಿಯ ಅವಧಾನಿಸುತ

ಮೃಣಾಲಿನಿಯನ್ನು ತೆರೆದು ತೇಜಸ್ವಿಯಂತೆ ಮೈಯೊಲಿಯುತ

ಎದ್ದು  ಸ್ವಾತಿ ಮಳೆಯ ಹನಿಗಳು ಜೀವಿತವಿರುವ

ಮಧುಮುಟ್ಟದ ದಿವ್ಯ ಬಬ್ಬಲಿತ ಪುಷ್ಪಗಳನ್ನು

ಜಾನುವಾರುಗಳಿಗಾಹಾರವನಾಗಿ ಅರ್ಪಿಸಿ ಪ್ರಾಣವನ್ನು ಸಡಿಲಗೊಳಿಸಿಕೊಂಡು

ಪೈಗಳ ಕಾಲೇಜಿನಲ್ಲಿ ಇಂತಹ ಅಮೂಲ್ಯ ಸ್ನೇಹಿತರ ನಡುವೆ

ನಾನು ಸದಾ ರಕ್ಷಿತನಾಗಿರಲಿ ಎಂದು ಬೇಡಿಕೊಳ್ಳುವೆ.

 

ರಕ್ಷಿತ್.  ಹೆಚ್. ಆರ್

ದ್ವೀತಿಯ ಬಿ ಎ ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ಅವನ ತರಗತಿಯ ಸುಮಾರು 60 ಕ್ಕೂ ಹೆಚ್ಚು ಬಿ.ಎ ಮತ್ತು ಬಿ.ಎಸ್.‌ಡಬ್ಲ್ಯೂ. ವಿಧ್ಯಾರ್ಥಿಗಳ ಹೆಸರಿನಲ್ಲೇ ಈ ಪದ್ಯ ರಚಿಸಲಾಗಿದೆ. 

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

Comment (1)

  • ಜಯರಾಮಕೃಷ್ಣ kaje| July 30, 2022

    Good

  • Leave a Reply

    Your email address will not be published. Required fields are marked *