ತೃಣ Jul 21,2025 Leave a comment Post Views: 162 ತೃಣಸಾಗರದ ಮುಂದೊಂದು ಹನಿನೀರು ತೃಣವಂತೆಶತಕೋಟಿ ಮಳೆಹನಿಯು ಸುರಿದಿಲ್ಲವೆ?ಗಂಟೆಗಳ ಮುಂದೆ ಒಂದು ಕ್ಷಣ ತೃಣವಂತೆಗಡಿಯಾರದಲಿ ಚಲಿಸೊ ಮುಳ್ಳಿಲ್ಲವೆ?ಅರಣ್ಯಗಳ ಮುಂದೆ ಒಂದು ಸಸಿ ತೃಣವಂತೆತಾ ಬೆಳೆದು ನೆರಳನ್ನು ನೀಡಿಲ್ಲವೆ?ಇಷ್ಟು ಗಿಡವಿದ್ದರೂ ಗುಬ್ಬಿ ತಾ ಬಳಸುವುದುಗೂಡು ಕಟ್ಟಲು ಈ ತೃಣವಲ್ಲವೆ? ನೀನಾಗು ಕರಿಮೋಡ ಕರಗಿ ಧರೆಗಿಳಿವ ನೀರಾಗುಕವಿದಿಟ್ಟ ಗೂಡಿನಲಿ ಬೆಳಗೊ ಹೊಂಬೆಳಕಾಗುಗೊಂದಲದ ದಿನದಂದು ತಿಳಿನೀಲ ಬಾನಾಗುಅಲೆಯಾಗು ಕಡಲಿನೊಳು, ಹರಿವ ತೊರೆಯಾಗುಸುಡು ಸುಡುವ ಸೆಕೆಯಲ್ಲಿ ತಣ್ಣಗಿನ ನೀರಾಗುಉರಿಬಿಸಿಲ ಬೇಗೆಯಲಿ ಹೆಮ್ಮರದ ನೆರಳಾಗುಮೈಕೊರೆವ ಚಳಿಯಲ್ಲಿ ಬೆಚ್ಚನೆಯ ಗೂಡಾಗುಗೋಳು–ಜಂಜಾಟದೊಳು ನೆಮ್ಮದಿಯ ಸೂರಾಗುಕಡು ಕಟುಕತನದೆದುರು ಜಯಜಯಿಸೊ ಹಠವಾಗುಬರಿದಾದ ಬಾನಿನಲಿ ಮಿಂಚಾಗಿ ಮಿನುಗು Ms. Spoorthi N M 1st Year B.ScKateel Ashok Pai Memorial College, Shivamogga