‘ಸಂಧ್ಯಾ’ ಕಾಲದಲಿ ‘ಅನರ್ಘ್ಯ’ ‘ಶ್ರೀಕರ’ನ ‘ರೇಷ್ಮೆ’ಯ
‘ಕಿರಣ’ಗಳು
‘ಅನು’ದಿನವು ‘ಶ್ವೇತ’ಪತ್ರಗಳ ಮೇಲೆ ‘ಮಂಜಿ’ನ
‘ಹನಿ’ಯ ಸುರಿಸುತ ‘ನೆನೆಸಿ’
‘ಸುನೀಲಾ’ಕಾಶದಲಿ ‘ರಜತ’ ಮೇಘಗಳ ‘ಅಂಜಿ’ಸಿ
ಹುತ’ವಹಾಬ’ನ ಹಿಂದಿಕ್ಕಿ ಹರಿಸುತ ‘ವಿಭಾ’ವಳಿಯ
‘ಚೆನ್ನ-ವಿಶ್ವ’ದಲಿ ಮುರುಳಿ ‘ರಾಯ’ನ ‘ಶೃತಿ’ಯ ‘ಮೋಹಿಸುತ’
‘ಜೇನ”ಸುವರ್ಚಲ’ ‘ಪ್ರಶಾಂತ’ ಮನಸಿನಲಿ
‘ಹುಚ್ಚ’ನ ಗುರು-‘ಪ್ರೇಮ’ ಕವಿತೆಗಳ
‘ನವೀನ’ ‘ಕಾವ್ಯದಿಂಚರ’ಗಳು ಕಡೆದು
‘ಅಶ್ವಿನಿ’ಯ ‘ರೂಪ’ವಿಹ ‘ವಜ್ರಕಾಯ’ನ
‘ಕೀರ್ತಿ’ಯ ಮಿತ್ರ,
ಉರದಿ ‘ನಾಗ’ವ ಧರಿಸಿಹ ಗುರು-‘ಗಣೇಶ’ನ ‘ಪೂಜೆ’ಯ
‘ವಿನಯ’ದಿ ‘ಅರ್ಚಿಸಿ’
ಹೆಸರ ಅರಿಯದ ಗುರುವ ಕ್ಷಮಿಸೆಂದು ಬೇಡುತ
ಸಹಸ್ರ ‘ಮನುಷ್ಯ’ ಜನುಮದಲಿ ‘ಸಂತೋಷ’ಕೆ ‘ಮೇರೆ’ಗಳಿಲ್ಲದೆ ನೀವು ಬದುಕಿ , ನಾವು ನಿಮ್ಮ ಪಾದದ
ಧೂಳಾಗಿರಲೆಂದು ‘ಶ್ರೀದೇವಿಗೆ’
‘ಅಶೋಕ’ವನದಡಿಗಿರುವ ಇವರೆಲ್ಲರಿಗೂ ‘ಶಿಕ್ಷಕರ-ದಿನಾಚರಣೆ’ಯ ದಿನ ಆಶೀರ್ವಾದಗಳ ‘ಅಕ್ಷಯ-ಪ್ರಸಾದವನು’ ನೀಡೆನುತ ಕೇಳುತಲಿ…..
ರಕ್ಷಿತ್. ಹೆಚ್. ಆರ್
ತೃತೀಯ ಬಿ ಎ , ವಿಧ್ಯಾರ್ಥಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ಶಿಕ್ಷಕರ ದಿನಾಚರಣೆ ಪ್ರಯುಕ್ತ, ಕಾಲೇಜಿನ ಎಲ್ಲ ಅಧ್ಯಾಪಕರುಗಳ ಹೆಸರಿನಲ್ಲಿ ರಚಿಸಿರುವ ಕವನ,
ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್ ಮಾಡಿ.