ಅಮ್ಮ ಎನ್ನುವ ಸಂಭ್ರಮ
ಅಕ್ಕರೆಯಿಂದ ಆಶೀರ್ವದಿಸಿ ಆನಂದಿಸಿ ಅಪ್ಪಿಕೊಳ್ಳುವವಳೇ ಅಮ್ಮ…
ನನ್ನೆಲ್ಲ ನೋವಿಗೆ ನಗುವಾಗಿ ನನ್ನೆಲ್ಲ ಗೆಲುವಿಗೆ ಗುರುವಾಗಿ ನನ್ನೆಲ್ಲ ಭಾವಕ್ಕೆ ಮಗುವಾಗಿ ಸ್ಪಂದಿಸುವವಳೇ ಅಮ್ಮ…
ನನ್ನೆಲ್ಲ ನೆನಪುಗಳಲ್ಲಿ ಅಚ್ಚಳಿಯದೆ ಅಚ್ಚಾಗಿರುವವಳು ನನ್ನಮ್ಮ…
ನನ್ನೆಲ್ಲ ಕನಸನ್ನ ನನಸಾಗಿಸುವ ಹಾದಿಯಲ್ಲಿ ಕಠೋರತೆಯ ಮೆಟ್ಟಿಲನ್ನ ಮೆಟ್ಟಿ ನಿಂತವಳು ನನ್ನಮ್ಮ…
ಗುರುವಾಗಿ, ಗೆಲುವಾಗಿ, ವರವಾಗಿ, ಪರವಾಗಿ, ನನಗೆ ಸರಿಯಾಗಿ ನಿಂತವಳವಳೇ ನನ್ನಮ್ಮ……
ವಿದ್ಯಾಶ್ರೀ , ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,
ಸ್ತ್ರೀ ನಿನ್ನ ಹೊಗಳಲು ಬೇರೆ ಪದಗಳುಬೇಕೆ “ಅಮ್ಮ” ಎಂಬ ಎರಡಕ್ಷರದ ಪದವೇ ಸಾಕೆ….
ಸುಪ್ರಿಯಾ L, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,
ಅಮ್ಮಾ ಎಂದಾಕ್ಷಣ ಕಣ್ಣಂಚಲ್ಲಿ ಆ ಪ್ರೀತಿ ಮಮತೆ ವಾತ್ಸಲ್ಯ ಎಲ್ಲವೂ ಒಂದು ಬಾರಿ ಪಟದಂತೆ ಹಾಸಿ ಹೋಗುತ್ತದೆ.
ಆದರೆ ಇದೆಲ್ಲದರ ಹೊರತಾಗಿ ಅಮ್ಮಾ ಎಂದರೆ.. ಮಾಂಸದ ಮುದ್ದೆಗೆ ಜೀವನಿತ್ತವಳು, ಜೀವಕ್ಕೆ ಜನುಮನಿತ್ತವಳು,
ಆ ಜೀವವು ಹೇಗೆ ಜೀವನ ನಡೆಸಬೇಕೆಂದು ದಾರಿ ತೋರಿದವಳು ಬಿದ್ದಾಗ ಎದ್ದೇಳು ಕುಗ್ಗಬೇಡ ಮುನ್ನುಗ್ಗು ಎಂದು ಹೇಳಿದವಳು..
ಗೆದ್ದಾಗ ಖುಷಿಪಟ್ಟು ಬೆನ್ನುತಟ್ಟಿ ಹಿಗ್ಗಬೇಡ ಎಂದು ಕಿವಿಮಾತು ಹೇಳಿದವಳು..
ಕಂದನ ಖುಷಿಯಲ್ಲಿ ತಾ ಸಂತಸಪಟ್ಟಳು. ಕಂದನ ದುಃಖದಲ್ಲಿ ತಾ ಅತ್ತವಳು…
ಅಮ್ಮಾ ಎನ್ನುವ ಎರಡು ಅಕ್ಷರಕ್ಕೆ ಸಾಕ್ಷಿಯಾದವಳು.
ಪ್ರಣಮ್ಯ B M, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,
ಅಮ್ಮನ ಪ್ರೀತಿಗೆ ಆಕಾಶದಷ್ಟು ಮಿತಿಯುಂಟೆ?
ಅಮ್ಮನ ಕರ್ತವ್ಯಕ್ಕೆ ದೇವರೇ ಕೈ ಮುಗಿದದ್ದು ಗೊತ್ತೇ?
ಎಲ್ಲಾ ಸಂಬಂಧಗಳಿಗೂ ಕೇಂದ್ರ ಬಿಂದು ಅಮ್ಮ,
ಅವಳಿಂದಾನೇ ಜೀವರಾಶಿಗಳ ವಂಶ ಬೆಳೆಯುವುದಮ್ಮ,
ಭದ್ರತೆಯ ಭಾವ ನಿರಾಳ ಮನಸ್ಸು ಭವಿಷ್ಯದ ಕನಸು,
ಸುಗಮ ಉಸಿರಾಟಕ್ಕೆ ಅವಳ ಪ್ರೀತಿಯೇ ಸೊಗಸು,
ಈ ಪ್ರತಿ ಉಸಿರಿಗೂ ಅಮ್ಮನ ಋಣವಿದೆ,
ಅಮ್ಮನಿದ್ದರೆ ಯೋಧನಷ್ಟು ಶಕ್ತಿ ಇದೆ,
ಆ ದೇವರಿಗೂ ಅಮ್ಮ ಬೇಕು,
ಆ ಅಪ್ಪುಗೆಯ ತಲೆ ನೇವರಿಸುವ ಕೈಗಳು ಬೇಕು,
ಅಮ್ಮನ ಮಾತು ಸುಳ್ಳನ್ನು ಸತ್ಯ ಮಾಡೀತು!
ನಂಬಿಕೆಯ ಆತ್ಮಕೆ ಬುನಾದಿ ಆದೀತು!
ನೋವಿನಲ್ಲೂ ದೇವರಿಗಿಂತ ಮೊದಲು ಅಮ್ಮ ಬಂದಾಳ,
ಇದು ಮನುಷ್ಯ ಸಂಕುಲದ ಎಲ್ಲಾ ಜೀವಿಗಳ ಜೀವಾಳ..
ಸಾಂಘವಿ ಆರ್ ಶಂಕರ, ಪ್ರಥಮ ಎಂ, ಎಸ್ಸಿ , ಮನೋವಿಜ್ಞಾನ ವಿದ್ಯಾರ್ಥಿನಿ,
ತ್ಯಾಗಮಹಿ ತಾಯಿ
ತಾಯಿ ಎನ್ನುವುದಕ್ಕಿಂತ “ಅಮ್ಮ”, ಈ ಪದ ಮನಸ್ಸಿಗೆ ಹೆಚ್ಚು ಹತ್ತಿರ.
ನಮಗೆಲ್ಲ ತಿಳಿದಿರುವ ಹಾಗೆ ನನ್ನಮ್ಮ,,ನಿಮ್ಮಮ್ಮ ಹಾಗೂ
ಎಲ್ಲರ ಅಮ್ಮಂದಿರು ತ್ಯಾಗಮಹಿಯರೇ, ನಮ್ಮ, ನಿಮ್ಮನ್ನು ಈಗಲೂ ಕೂಸಿನಂತೆ
ಪ್ರೀತಿಸುವ, ನಮ್ಮ ಕ್ಷೇಮಾಭಿವೃದ್ಧಿಗಾಗಿ ಸದಾ ಚಡಪಡಿಸುವ ತಾಯಿಯ ಗುಣ ಕೇವಲ
ಮಾನನಕುಲಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಪ್ರತಿಯೊಂದು ಜೀವಸಂಕುಲದಲ್ಲಿರುವ
ತಾಯಿಯಲ್ಲು ಕಾಣಬಹುದಾಗಿದೆ. ಉದಾಹರಣೆಗೆ , ನಮ್ಮ ಮನೆಯಲ್ಲಿದ್ದ ಕೋಪಿಷ್ಟ ಹೆಣ್ಣು ಬೆಕ್ಕನ್ನೆ ತೆಗೆದುಕೊಳ್ಳುವ,
ಗುರ್ರ್ ಎನ್ನುತ್ತ, ಸದಾ ತನ್ನದೆ ಪ್ರಪಂಚದಲ್ಲಿರುತ್ತಿದ್ದ ಅವಳು, ಈಗ ಎರಡು ಮರಿಗಳ
ತ್ಯಾಗಮಹಿ ತಾಯಿ. ತನ್ನ ನಿದ್ದೆ, ಆಹಾರ, ಆಟ, ಬೇಟೆ ಎಲ್ಲವನ್ನು ತ್ಯಜಿಸಿ ಹಗಲು ರಾತ್ರಿಯನ್ನದೆ
ತನ್ನ ಮರಿಗಳ ಕಾವಲು ಕಾಯುತ್ತ , ಪೋಷಣೆ ಮಾಡುತ್ತಿದ್ದಾಳೆ. ತಾಯಿಯ ಬಗ್ಗೆ ಎಷ್ಟು
ಬರೆದರು ಸಾಲದು ಎಂದು ತಿಳಿದಿದ್ದರೂ ಈ ನನ್ನ ಪುಟ್ಟ ಪ್ರಯತ್ನವನ್ನು ನನ್ನ ತ್ಯಾಗಮಹಿ ತಾಯಿಗೆ
ಅರ್ಪಿಸುತ್ತಿದ್ದೇನೆ.
ರಾಧಿಕ.ಎಸ್. ಜೋಷಿ, ಅಂತಿಮ ವರ್ಷ, ಬಿ.ಎ, ವಿದ್ಯಾರ್ಥಿನಿ,
ನಮ್ಮೆಲ್ಲ ಚೇಷ್ಟೆ, ಕಾಟ ಸಹಿಸ್ಕೊಳೋ,
ಕೇಳ್ದೆ ಇದ್ರು ಎಲ್ಲ ಕೊಡೋ “ಕರುಣಾಮಯಿ”. ♥
ಸ್ವಾರ್ಥ ಅಂದ್ರೇನು ಅಂತನೆ ಗೊತ್ತಿಲ್ದೆ ಇರೋ ಜೀವ..
ಅದುವೇ ಅಮ್ಮ… ಅಮ್ಮ ಅಂದ್ರೆ ಸರ್ವಸ್ವ”.
ಮಧುಶ್ರಿ, ದ್ವೀತಿಯ ಬಿ ಎ , ವಿಧ್ಯಾರ್ಥಿನಿ ,
ನೋವುಂಡಿ ನಲಿವು ನೀಡಿದವಳು ನನ್ನಮ್ಮ 🤰
ನನ್ನ ನಗುವ ಕಂಡು, ಜಗವ ಮರೆತಳು
ನನ್ನೊಲವಿನಮ್ಮ 🤱
ಸ್ವಾರ್ಥವೇ ಇಲ್ಲದ ಸ್ಫೂರ್ತಿಯ ಒಡತಿ
ಆ ನನ್ನ ಚಿಲುಮೆಯ ಅಮ್ಮ 🧎♀️
ಕಂಡ ಕನಸೆಲ್ಲವ ನನಗೆಂದೆ ಧಾರೆ ಎರೆದ ನನ್ನೊಲವಿನ ಅಮ್ಮ 🚶♀️
ತನ್ನ ಬೆವರಿನೊಳಗೆ
ಭಾವನೆಗಳನ್ನು ತುಂಬಿ ಸುರಿದವಳು ನನ್ನಮ್ಮ 🤩
ಪ್ರತೀ ಹೆಜ್ಜೆ ನಾ ನಡೆದ ಜಾಗದಲ್ಲೇ
ತನ್ನ ಜಗವ ಕಾಣುವಳು ನನಮ್ಮ 👣
ಆಸೆಗಳೊಂದಿಗೆ ಅವಕಾಶಗಳನ್ನು
ಆಮಂತ್ರಣವಾಗಿ ಕೊಡುತಿಹಾಳು ನನ್ನಮ್ಮ 💆
ಸರ್ವಸ್ವವನೆ ಸಾಂಗವಾಗಿ
ಸಮರ್ಪಿಸಿದವಳು ನನ್ನಮ್ಮ 💫
ಅಣಕಿಸಿದವರ ಮುಂದೆಯೇ
ಅರಳುವ ಹೂವಗ ಬೇಕೆಂದು
ಹರಸಿದವಳು ನನ್ನಮ್ನ 🦾
ಹಡೆದವಳಾಗಿ, ಗೆಳತಿಯಾಗಿ,
ಮನೆಯ ಒಡತಿಯಾಗಿ,
ಅಂದಿಗೂ, ಇಂದಿಗೂ, ಎಂದೆಂದಿಗೂ ಇರುವೇ
ನನ್ನ ನಲ್ಮೆಯ ತಾಯಿಯಾಗಿ. 😘
🥰ಅಮ್ಮಂದಿರ ದಿನದ ಹಾರ್ಧಿಕ ಶುಭಾಶಯಗಳು 💫
ಭಾರ್ಗವಿ G R , ಪ್ರಥಮ ಬಿ ಎ, ವಿದ್ಯಾರ್ಥಿನಿ,
ನನ್ನ ಪಾಲಿಗೆ ದೇವರು ಅಂದರೆ ನನ್ನ ಅಮ್ಮ ಎಲ್ಲ ತೊಂದರೆಗಳಿಂದ ಪಾರುಮಾಡುತಾರೆ ಈ ನನ್ನ ಅಮ್ಮ 🤱🏻
ನೀನು ನನ್ನ ದೇವರು❤️🤱🏻
ನಮಗಾಗೇ ಸುರಿಸುವೆ ಬೇವರು
ನಮನ್ನು ಕಾಯಲು ನೀನು ಯಾವಾಗಲು ತಯಾರು
ನೀನೇ ನಮಗೆ ಪವರು⚡
ಅಮ್ಮಂದಿರ ದಿನದಲೀ ಕಟುತ್ತೆವೇ ನಿಮಗೆ ಪ್ರೀತೀಯ ತೇರು 🗼❤️
ಉಸಿರು ನಿಲ್ಲೋ ತನಕ ಪ್ರೀತೀಸೋ ಒಂದು ಜೀವ ಅಂದರೆ ಅದು ತಾಯೀ ಮಾತ್ರ
ಎಲ್ಲರಿಗೂ ಅಮ್ಮಂದಿರ ದಿನದ ಶುಭಾಶಯಗಳು🤱🏻
ಭವಾನಿ S U, ಪ್ರಥಮ ಬಿ ಎ, ವಿದ್ಯಾರ್ಥಿನಿ,
ಹೊರುವಳು ನಿನ್ನ ಗರ್ಭದಲಿ ನವಮಾಸ,
ಕಾಣಹೋರಾಟಳು ನಿನ್ನೆಡೆಗೆ ನೊರೆಂಟು ಕನಸ,
ಮರೆವಳು ಅವಳ ನೋವ ನೋಡಿ ನಿನ್ನ ನಗುವಿನ ಮಂದಹಾಸ,
ಅರ್ತಾಯಿಸುವಳು ಪ್ರಪಂಚಾವ ಸಮಾಜದೊಂದಿಗ ಸೇನೆಸಾಡುತ,
ಬೆಂಬಲಿಸುವಳು ನಿನ್ನ ಕನಸುಗಳಿಗೆ ರೆಕ್ಕೆಯ ಕಟ್ಟುತ,
ಪ್ರತಿ ಕ್ಷಣವು ನಿನಗಾಗಿ ಚಡಪಡಿಸುತಾ,
ಸ್ವಾರ್ಥಿಗಳ ಪ್ರಪಂಚದಲಿ ನಿನಗಾಗಿ ಪ್ರಾರ್ಥಿಸುತ…..
ಅಮ್ಮ ಈ ಪದವೇ ಒಂದು ಅದ್ಬುತ..
ಸುಷ್ಮಿತಾ P, ಪ್ರಥಮ ಬಿ ಎ, ವಿದ್ಯಾರ್ಥಿನಿ,
ಹುಟ್ಟುವಾಗ “ಅಮ್ಮ “
ಅಳುವಾಗ “ಅಮ್ಮ “
ನಗುವಾಗ “ಅಮ್ಮ “
ಬಿದ್ದಾಗ “ಅಮ್ಮ “
ನಾವು ಎಲ್ಲಿದ್ದರೂ ಯಾವಾಗಲೂ ಜೊತೆ ಇರುತ್ತಾರೆ “ಅಮ್ಮ “
ಕಾರಣ ಅವರಿಂದಲೇ ಸಿಕ್ಕಿದೆ ನಮಗೆ ಈ “ಜನ್ಮ “
ಸುದೀಪ. ಡಿ, ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ,
ಕಷ್ಟವೇ ಬಂದ್ರು, ಸುಖನೆ ಇದ್ರೂ ನಿನೊಂದಿಗಿರುವವಳು ನೆರಳಿನಂತೆ…
ನೀ ಓಡಿದರು, ನೀ ನಡೆದರು
ನಿನ್ನ ಹಿಂದೆಯೇ ಬರುವಳು
ಹೆಜ್ಜೆ ಗುರುತಿನಂತೆ.🤱
ತರುಣ್ T S, ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ
ಮೋದಮೊದಲು ಅಂಬೆಗಾಲಾಕುತ ನಿನ್ನನೇ ಹುಡುಕುತಲಿದ್ದೇನು ನಾನು,
ನಂತರ ಗೋಡೆಯನ್ನು ಹಿಡಿದು ನಡೆಯಲು ಕಲಿಸಿದವಳು ನೀನು,
ಆಮೇಲೆ ನಿನ್ನ ಸೀರೆಯ ಸೆರಗನ್ನು ಹಿಡಿದು ನಿನ್ನಿಂದ ಓಡಾಡಿದೇನು ಅಮ್ಮ,
ಎಲ್ಲಿ ನನ್ನ ಕಾಲಿಗೆ ನೋವಾಗುವುದೆಂದು ನಿನ್ನ
ಮಡಿಲಲ್ಲಿ ಕೂರಿಸಿಕೊಂಡು ಸುತ್ತಿದವಳು ನೀನು
ನೀ ಜೊತೆಯಲಿ ಇರುವೆ ಎಂಬ ನಂಬಿಕೆಯಿಂದಲೇ ನಾ ಬೆಳದಿರುವೆ
ಆದರೂ,
ನೀನಿಲ್ಲದೆ ನನ್ನ ಜೀವನ ಕಾಣುವುದು ಅನಾಥ ಶವವಾಗಿ,
ಈ ಭೂಮಿಯಲ್ಲಿ ನನಗೆ ಜನ್ಮ ನೀಡಿದ ನೀನು ಸಹೃದಯಿ….ಅಮ್ಮ!
ಉಸಿರು,ಹೆಸರು,ಬದುಕು ಕೊಡುವವಳು__!
ಹಸಿದಾಗ ಹಸಿವ ನಿಗಿಸುವವಳು__!
ಎಲ್ಲವನ್ನೂ ಸಹಿಸಿ ಸಲಹುವವಳು ನಮ್ ಅಮ್ಮ!
ನಾವು ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸುವವಳು
ನಾವು ಸೋತಾಗ ಆತ್ಮಸ್ಥೈರ್ಯ ತುಂಬುವವಳು
ಕನಸಿನಲ್ಲು ನಮ್ಮನು ಕಾಯುವವಳು……ಅಮ್ಮ_!
“ನಾನೆಂದೂ ನಿನಗೆ ಚಿರಋಣಿ _ಅಮ್ಮಾ!!”
ಅಂಜಲಿ ನಾ ಜಲಾಟಿಗೌಡ್ರ, ಪ್ರಥಮ ಬಿ ಎ, ವಿದ್ಯಾರ್ಥಿನಿ,
ನನ್ನ ಗುರು ನನ್ನ ತಾಯಿ……..
ಒಂದು ಪುಟ್ಟ ಕಥೆ, ಸುಮಾರು ಎರಡೂವರೆ ವರ್ಷಗಳ ಹಿಂದೆ ಪ್ರಥಮ ಪಿಯುಸಿ ಅಡ್ಮಿಷನ್ ಗಾಗಿ 25 ಸಾವಿರ ರೂಪಾಯಿಗಳನ್ನು ಎರಡರಿಂದ ಮೂರು ದಿನಗಳಲ್ಲಿ ಕೊಡಲು ನನ್ನ ಅಮ್ಮನಿಗೆ ಹೇಳಿದ್ದೆ, ದುರಾದೃಷ್ಟವಶಾತ್ ಅದನ್ನು ಹೊಂದಿಸಲು ನನ್ನ ತಾಯಿಗೆ ಆಗಲಿಲ್ಲ, ಅದಕ್ಕಾಗಿ ನಾನು ಬಾಯಿಗೆ ಬಂದಂತೆ ನಮ್ಮಮ್ಮನಿಗೆ ಬೈದು ಬಿಟ್ಟೆ, ಇದಾಗಿ ಎರಡುವರೆ ವರ್ಷ ಕಳೆಯಿತು ಪ್ರಥಮ ವರ್ಷದ ಡಿಗ್ರಿಗೆ ಅಡ್ಮಿಶನ್ ಆಗಿ ಮನೆಗೆ ಬಂದು ಕುಳಿತಾಗ ನನ್ನ ತಾಯಿ ಸಮಾಧಾನದಿಂದ ಕೇಳಿದರು “ಭವಿಷಃ 2 ವರ್ಷ ಕಳೆದಿರಬಹುದು, ನಿನಗೆ ಈಗ 25000 ದ ಬೆಲೆ ಗೊತ್ತಾಯ್ತಾ ಪುಟ್ಟ” ಎಂದು,ಅವತ್ತು ನನ್ನ ಮನಸ್ಸಿಗೆ ಬೇಜಾರಾಗುತ್ತದೆ ಎಂದು ಈ ಪ್ರಶ್ನೆಯನ್ನು ನಮ್ಮಮ್ಮ ಕೇಳದೆ ಇದಿದ್ದರೆ ನನಗೆ ನನ್ನ ತಪ್ಪಿನ ಅರಿವೇ ಆಗುತ್ತಿರಲಿಲ್ಲ,ಈ ಪ್ರಶ್ನೆಯನ್ನು ಕೇಳಿದಾಗ ನನಗೆ ಒಮ್ಮೆಲೆ ಯಾರೋ ಕೆನ್ನೆಗೆ ಹೊಡೆದಂತೆ ಆಯಿತಾದರೂ ನಮ್ಮಮ್ಮನಿಗೆ ಅಳುಕುತಲೇ ಉತ್ತರ ಕೊಟ್ಟೆ,”ನನಗೆ 25000 ದುಡಿಯಲು ಒಂದಷ್ಟು ತಿಂಗಳುಗಳೇ ಬೇಕಾಯಿತು, ಆದರೆ ನಾನು ನಿನಗೆ ಎರಡರಿಂದ ಮೂರು ದಿನದಲ್ಲಿ ಅಷ್ಟೊಂದು ಹಣ ಕೊಡಲು ಕೇಳಿದರೆ ನೀನು ಎಲ್ಲಿಂದ ಕೊಡುತ್ತೀಯಾಮ್ಮ, ಅವತ್ತು ದುಡ್ಡಿನ ಬೆಲೆ ನನಗೆ ಗೊತ್ತಿರಲಿಲ್ಲ, ನೀನು ನನ್ನನ್ನು ಇಲ್ಲಿಯತನಕ ಓದಿಸುವುದಕ್ಕೆ ಎಷ್ಟು ಕಷ್ಟಪಟ್ಟಿದ್ದೇ ಅಂತಲೂ ಗೊತ್ತಿರಲಿಲ್ಲ, ಅವತ್ತಿನ ಎಲ್ಲ ಮಾತುಗಳಿಗೂ ನನ್ನ ಕ್ಷಮಿಸಮ್ಮ” , ಎಂದು ಕೇಳಿದೆ, ತಾಯಿಯ ಗುಣವೇ ತಮ್ಮ ಮಕ್ಕಳು ಏನು ತಪ್ಪು ಮಾಡಿದರೂ ತಿದ್ದಿ ಬುದ್ಧಿ ಹೇಳುವುದು, ನಮ್ಮಮ್ಮ ಒಂದು ನಿಮಿಷವೂ ನನ್ನ ಮೇಲೆ ಬೇಜಾರು ಮಾಡಿಕೊಳ್ಳದೆ ನನ್ನ ಕ್ಷಮಿಸಿದರು.
ಇದರಿಂದ ಕಲಿತದ್ದು ನಾವು ಎಷ್ಟೇ ಕಲಿತರೂ, ಏನನ್ನೇ ದುಡಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ಅವನ್ನೆಲ್ಲ ತಂದು ನಮ್ಮ ತಾಯಿಯ ಪದತಲಕ್ಕೆ ಹಾಕಿದಾಗ ಅವರ ಅನುಭವದ ಹತ್ತು ಪರ್ಸೆಂಟ್ ಸಹ ಆಗಲಾರದು.
ನನ್ನ ತಾಯಿಗೂ ಮತ್ತು ನನ್ನ ದೇಶದ ಎಲ್ಲ ತಾಯಂದಿರಿಗೂ ತಾಯಂದಿರ ದಿನದ ಒಂದು ದಿನದ ಶುಭಾಶಯವಲ್ಲಾ, ಬದುಕಿರುವವರೆಗೂ ಪ್ರತಿದಿನವು ಶುಭಾಶಯಗಳು ಮತ್ತು ಶತ ಶತ ನಮನಗಳು ………..🙏🙏🙏
ನಾಗೇಂದ್ರ T R , ಪ್ರಥಮ ಬಿ ಎಸ್ ಡಬ್ಲ್ಯೂ, ವಿದ್ಯಾರ್ಥಿ,
To her,
Who always makes me feel
I’m exceptional.
Needless to verse,
You arrayed all the good.
You ushered,
How’s to be
Sturdy in life.
Going against the odds,
You taught to be
Adamant about the desires.
Couldn’t I be venturous,
Without you.
‘You’, you are unexampled.
Devika, 2nd Year MSc Psychology
I Know THANK YOU is
Such a small world for all
That you have done for me.
I cannot promise
You all the happiness
In the world,
But I will try my best to keep
You happy and make sure not
To bring a single tear to your eyes.
Love you lot Amma
Happy Mother’s day
Sinchana J S, 1st Year BA,
Maa,
With you by my side, every hurdle sails with ease ,
with you by my side even the thirst quenches without water,
with you by my side my appetite is knocked with your nourishment of care, with you by my side discomforts are bashed with comforts,
with you by my side my miseries are led to the path of agony,
with you by my side the snow enfolds me with warmth of your affection,
with you by my side the world ceases to exist,
with you by my side happiness is seated with it’s broken legs,
with you by my side the nightmares appear to be daydreams ,
with you by my side make my desires dissolve,
with you by my side, your presence makes the paradise shy away from its contentment,
with you by my side makes everything in my life better just by being in it! No number of births can suffice my gratitude towards you, and the only way out is to be thankful to the lord for bestowing me with a treasure like you!!
You are the most precious art and a blessing that i have ever laid my eyes on!!
Happy mother’s day maa!!
Ashwini M K, Final Year BA,
Amma,
The word is itself filled with love and grace you offer,
Those times when you starve for me and receive me with a good mood,
Those days when you pour your heart out and cook delicious food,
Those minutes where you spend thinking of me,
How can I repay all of them?
All I can say is my love for you shall never end!
Your loving Daughter
ANUPAMA S A R, 2nd Year MSc Psychology,
ಇವತ್ತು ಅಮ್ಮಂದಿರ ದಿನಾಚರಣೆ, ಈ ಒಂದು ದಿನ ಅವಳ ಸಂಭ್ರಮಕ್ಕೆ ಸೀಮಿತ ವಾಗದೆ ವರ್ಷದ 365 ದಿನಗಳು ಅವಳನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ,
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಮ್ಮನನ್ನು ಪ್ರೀತಿಯಿಂದ ಅಕ್ಷರಗಳಲ್ಲಿ ವರ್ಣಿಸಿದ್ದಾರೆ, ಅವರ ಈ ಸಣ್ಣ ಪ್ರಯತ್ನಕ್ಕೆ ಅಭಿನಂದನೆಗಳು,
ಧನ್ಯವಾದಗಳೊಂದಿಗೆ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.
Image 1-4 Credit: Google.com / Gubbi – AMMA-YouTube
Image 5: Pranamya B M
Comment (2)
ಡಾ. ಮೈತ್ರೇಯಿ ಆದಿತ್ಯ| May 8, 2022
ಎಲ್ಲವೂ ಅದ್ಭುತವಾದ ಬರಹಗಳು… ಅಮ್ಮ ಎಂಬ ಎರಡಕ್ಷರದ ಆತ್ಮಬಂಧುತ್ವದ ಭಾವನೆಗಳನ್ನು ಚಿತ್ರ ಹಾಗೂ ಪದಗಳಲ್ಲಿ ತುಂಬಾ ಸೊಗಸಾಗಿ ಮಕ್ಕಳು ಕಟ್ಟಿ ಕೊಟ್ಟಿದ್ದಾರೆ.
ಮೋಹನ್ ಕುಮಾರ್. ಆರ್| May 14, 2023
ಬರಹ ರೂಪದ ಅಷ್ಟು ಅಂಶಗಳು ಭಾವರೂಪಕ್ಕಿಳಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಪ್ರತಿಯೊಂದು ಬರಹವು ಹೃದಯದ ಅಂತರಾಳದಿಂದ ಸೃಜಿಸಿ ಬಂದಿರುವ ನೈಜ ಅಭಿವ್ಯಕ್ತಿಯಾಗಿದೆ