Post Views: 235
ಉಳಿಸಿರೋ ನನ್ನನ್ನು ನನಗಾಗಿ ಅಲ್ಲ ನಿಮಗಾಗಿ.
ಜೀವ ಸಂಕುಲದ ಒಳಿತಿಗಾಗಿ…
ಇಲ್ಲಿ ಹಾಳು ಮಾಡಿ ಭೂಮಿಯನ್ನು !
ಅನ್ಯ ಗ್ರಹ (ಮಂಗಳ ಮತ್ತು ಚಂದ್ರ) ನೋಡುವಿರೇಕೊ??
ಇಲ್ಲಿ ಸಲ್ಲದ ನೀವು, ಅಲ್ಲಿ ಸಲ್ಲುವೀರೇನೋ ಮೂರ್ಖರ?
ತಾಯಿಯನೆ ಕೊಲ್ಲುತ ಹೊರಟ ನಿಮಗೆ ಬದುಕೆಲ್ಲಿ💔?
ಹಸಿರು ಕೊಂದ ಮೇಲೆ ಉಸಿರಾಡಲು ನಿಮಗೆ ಉಸಿರೆಲ್ಲಿ?!
ನನ್ನೊಡಲ ಬಗೆದರು ನಾ ನಗುತ ಸ್ವಾಗತಿಸುತಿದ್ದೆ.😊
ನನ್ನ ಮಾರಿದರು ಕೊಂಡವರ ಬಳಿ ನಗುತಲಿದ್ದೆ..🥺😁
ಹೆತ್ತ ತಾಯಿ ನಿಮ್ಮನ್ನು ಹಡೆದವಳು ನಿಜ 💯…
ಸತ್ತಾಗ ಹೆಣದ ವಾಸನೆ ಅವಳು ಸಹಿಸಿಕೊಳ್ಳದೆ ಮೂಗು ಮುಚ್ಚಿಕೊಳ್ಳುವ ಸಮಯದಲ್ಲಿ!
ನಿಮ್ಮ ಹೆಣವನ್ನು ಒಡಲಲ್ಲಿ ಬಚ್ಚಿಟ್ಟುಕೊಳ್ಳುವ
ಭೂತಾಯಿ ನಾ ಮನುಜ..
ಉಳಿಸಿರೋ ನನ್ನ ನನಗಾಗಿ ಅಲ್ಲ..
ನಿಮ್ಮ ಉಳಿವಿಗಾಗಿ 🥺💔
ನಾಳಿನ ಒಳಿತಿಗಾಗಿ…!!!!
ಮಧುಶ್ರೀ,
ತೃತೀಯ ಬಿ. ಎ, ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Comment (5)
Nagendra| January 17, 2023
ಭೂಮಿತಾಯಿಯ ಬಗ್ಗೆ ಅತ್ಯದ್ಭುತ ಕವನ really hatsof…….
Madhushree| April 3, 2023
Thank you
Dr Sandhyakaveri| January 17, 2023
Dear Madhushri…well spelled…a poem to introspect …keep it up
Monika first year BSW| January 17, 2023
Wow nice words..
Faruk| January 17, 2023