
ಗೆಳೆಯನಿಗೊಂದು ಮಾತು
ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿ ಸೆಳೆದು ಬಿಡುತ್ತದೆ ವಿದ್ಯುತ್ ಶಾಕ್ನಂತೆ. ಇಲ್ಲ, ಸ್ಪರ್ಶಕ್ಕೆ ಸಿಗದಷ್ಟು ದೂರವೇ ಇರಬೇಕು.ಈ ಜೀವನಚಕ್ರ ನದಿಯ ತೆರೆಗಳಂತೆ ಉರುಳಿ ಹೊರಳುತ್ತಲೇ ಇರುತ್ತದೆ. ಇದಕ್ಕೆ ಆರಂಭವಿಲ್ಲ, ಅಂತ್ಯವಿಲ್ಲ, ಸ್ಥಿರತೆ ಇಲ್ಲ.
ಜೀವದ ಗೆಳೆಯನಿರಲಿ ಗೆಳತಿಯಿರಲಿ ನಡುವೊಂದು ಲಕ್ಷ್ಮಣ ರೇಖೆಯ ಪಾವಿತ್ರ್ಯ ಕಾಯ್ದುಕ್ಕೊಳ್ಳೋಣ. ಆಗಲೇ ನಮ್ಮ ಅಕ್ಕರೆಯ ಆಚೆ ಈಚೆ ಇಬ್ಬರು ಬೆಳೆಯಬಲ್ಲೆವು. ಅಷ್ಟೇ ಅಲ್ಲದೆ ಪರಸ್ಪರರ ಹೊಸ ಅಗತ್ಯಗಳನ್ನು ಅರಿಯುತ್ತ ಸಂಬಧದಲ್ಲಿ ತಾಜಾತನ ಉಳಿಸಿಕ್ಕೊಳ್ಳಬಲ್ಲೆವು.
ನಿನ್ನ ಗೆಳೆತನದ ಸುವಿಶಾಲ ಆಲದಡಿ ಪಸರಿಸಿ ತಣ್ಣನೆಯ ತಂಪಿನಲಿ ತಂಗಿರುವೆನು. ಜೀವನದ ಅನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ತಂಗಿರುವೆನು. ಗೆಳೆತನವೆ ಇಹಲೋಕಕ್ಕಿರುವ ಅಮೃತ ಅದನ್ನುಳಿಸಿಕೊಂಡರೆ ಅದುವೇ ಜೀವನಾಮೃತ.
ನೊಂದಾಗ ಸಮಾಧಾನ ಹೇಳಿ ಎಡವಿ ಬಿದ್ದಾಗ ಮೇಲಕ್ಕೆ ಎತ್ತಿ ಸುಖ ದುಃಖದಲ್ಲಿ ಭಾಗಿಯಾಗಿ ಜೊತೆ ಜೊತೆಯಾಗಿ ಸಾಗುವ ಪವಿತ್ರ ಸಂಬಂಧವೇ ನಿಜವಾದ “ಸ್ನೇಹ”.
ಇರಬೇಕು…….ಒಬ್ಬ ಗೆಳೆಯ/ಗೆಳತಿ,
ನೋವುಗಳಿಗೆ ಸ್ಪಂದಿಸುತ್ತ, ತಪ್ಪುಗಳನ್ನು ತಿದ್ದುತ್ತ ,
ಖುಷಿಯನ್ನು ಹಂಚಿಕೊಳ್ಳುತ್ತಾ, ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ,
ಆಗಾಗ ರೆಗಿಸುತ್ತಾ, ಬದುಕಿಗೆ ಸ್ಪೂರ್ತಿ ತುಂಬುವಂತೆ,
ಇರಬೇಕು…….ಒಬ್ಬ ಗೆಳೆಯ/ಗೆಳತಿ ಇರಬೇಕು,
ಅದು ನಾನು ನಿಮ್ಮಲ್ಲಿ ಕಂಡೆ, ಏಷ್ಟೋ ಖುಷಿಯನ್ನುಪಟ್ಟೆ, ನನ್ನ ಎಲ್ಲಾ ನೋವುಗಳನ್ನು ನಿಮ್ಮೊಟ್ಟಿಗೆ ಸೇರಿದಾಗ ಮರೆತು ಸಂತೋಷದ ಕ್ಷಣಗಳನ್ನು ಅನುಭವಿಸಿದೆ.ಅತ್ತಾಗ ಕಣ್ಣೀರು ಒರೆಸಿದೆ ನನ್ನ ಸಂತೋಷದ ಕ್ಷಣಗಳನ್ನು ಹೇಳಿದಾಗ ನನಗಿಂತ ಹೆಚ್ಚು ಕುಷಿಪಟ್ಟವನು ನೀನು. ಗೊತ್ತಿಲ್ಲದವರ ಜೊತೆ ಸಲುಗೆ ಬೆಳಿಸಿ ಮೂವಿ, ಮಾಲು, ಎಂದು ಸುತ್ತಾಡುವಾಗ ಅದನ್ನು ಕಂಡು ಕೋಪಗೊಂಡವನು ನೀನು. ಆದಿನ ನೀನು ಇಲ್ಲಿ ಬಂದಿರುವ ಕೆಲಸ ಏನು ? ಇಲ್ಲಿ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದವನು ನೀನು. ನನ್ನ ಬದುಕಿನ ಗುರಿಯ ಬಗ್ಗೆ ತಿಳಿಸಿ ನನ್ನ ಬದುಕಿನ ಚಿಂತನೆಯ ದಿಕ್ಕನ್ನೇ ಬದಲಿಸುವಂತೆ ಮಾಡಿದವನು ನೀನು…
ಇವನು ತುಂಬಾ ಸ್ವಾಭಿಮಾನಿ, ಒಮ್ಮೊಮ್ಮೆ ಕಡು ಕೋಪಿಷ್ಟ,
ಆದರೂ ನನಗೆ ತುಂಬಾ ಇಷ್ಟ, ಇನ್ನೂ ಹೇಳೋಕೆ ಕಷ್ಟ.
ನಿನ್ನ ಬಳಿ ಯಾವುದೇ ವಿಷಯವಾದರೂ ಮೊದಲು ನಿನ್ನ ಬಳಿ ಹೇಳಬೇಕೆಂದು ಹಪಿಹಪಿಸುವಳು ನಾನು. ನಿನ್ನ ಸ್ನೇಹದಿಂದ ಏಷ್ಟೋ ಪ್ರೀತಿಯನ್ನು ಗಳಿಸಿದ್ದೇನೆ, ಈ ಸ್ನೇಹ ಹೀಗೆ ಇರಲಿ ಎಂದು ಆಶಿಸುವೆನು ನಾನು….
ಪರಿಚಯವಾಗಿದ್ದು ಆಕಸ್ಮಿಕವಾದರು ಸ್ನೇಹ ಶಾಶ್ವತವಾಗಿರಲಿ.
ಜೀವನ ಕರೆದುಕೊಂಡು ಹೋಗುವ ಕಡೆ ನಾವು ಹೋಗದೆ, ನಾವು ಹೋಗುವ ಕಡೆ ಜೀವನ ಕರೆದುಕೊಂಡು ಹೋಗಬೇಕು ಇದುವೇ ಜಾಣತನ ಗೆಳೆಯ …. ಇದು ನಾವಗಬೇಕು ಎಂದು ಅಶಿಸುತ್ತ
ನಿನ್ನ ಮುಂದಿನ ವಿದ್ಯಾಭ್ಯಾಸದ ಪಯಣ ಉತ್ತಮ ಪ್ರಗತಿಶೀಲದ ನಿಟ್ಟಿನಲ್ಲಿ ಸಾಗಲಿ ಎಂದು ಶುಭಹಾರೈಸುವೆ ಗೆಳೆಯ….
ಇಂತ ಸುಂದರ ಸ್ನೇಹ ಸಿಕ್ಕಿದ್ದು ಈ ಕಾಲೇಜು ನನಗೆ ನೀಡಿದ ಸುಂದರ ಉಡುಗೊರೆಯಾಗಿದೆ… ಅದಕ್ಕಾಗಿ ನಾನು KAPMC ಗೆ ಧನ್ಯವಾದ ಅರ್ಪಿಸುತ್ತೇನೆ
“ಸ್ನೇಹಿತರ ದಿನದ ಶುಭಾಶಯಗಳು”
ಅರ್ಪಿತ. ಸಿ
ತೃತೀಯ ಬಿ. ಎ, ವಿದ್ಯಾರ್ಥಿನಿ
Comment (1)
ನಾಗೇಂದ್ರ| August 7, 2022
ಪ್ರತಿಯೊಂದು ಸಾಲಿಗೂ ಬಹಳ ಅರ್ಥವಿದೆ, ಪ್ರತಿಯೊಂದು ಸಾಲಿನಲ್ಲೂ ಭಾವನೆಗಳನ್ನು ತುಂಬಿ ಬರೆದಿದ್ದೀರಿ………