ಶಿವಮೊಗ್ಗದ ಮಾನಸ ಟ್ರಸ್ಟ್ ವತಿಯಿಂದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜನ್ನು2017-18ನೇ ಸಾಲಿನಿಂದ ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಪ್ರಾರಂಭಿಸಲಾಗಿದ್ದು, ಬಿ.ಎ, ಬಿಎಸ್ಸಿ, ಬಿ.ಕಾಂ., ಬಿಸಿಎ ಮತ್ತು ಬಿ.ಎಸ್.ಡಬ್ಲೂ. ಪದವಿ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ದಿನಾಂಕ 16.12.2022 ರಂದು ಸಾಂಸ್ಕøತಿಕ ಉತ್ಸವವನ್ನು ಏರ್ಪಡಿಲಾಗಿದ್ದು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅಂತರ್‍ಕಾಲೇಜು ಮಟ್ಟದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಇದರೊಂದಿಗೆ ಉಪನ್ಯಾಸಕರಿಗೆ “ಹದಿಹರೆಯದ ಮಾನಸಿಕ ಸವಾಲುಗಳು ಮತ್ತು ಆಪ್ತಸಮಾಲೋಚನೆ” ಎಂಬ ವಿಷಯದ ಕುರಿತು ಒಂದು ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ಆಯೋಜಿಸಿರುತ್ತೇವೆ.